ನೋಕಿಯಾ: ಎರಡು ಹೊಸ ಸ್ಮಾರ್ಟ್‌ಫೋನ್‌ಗಳು, ಇಯರ್‌ಬಡ್ಸ್‌ ಬಿಡುಗಡೆ ಬೆಂಗಳೂರು: ಎಚ್‌ಎಂಡಿ ಗ್ಲೋಬಲ್ ನೋಕಿಯಾ 5.4, ನೋಕಿಯಾ 3.4 ಮತ್ತು ನೋಕಿಯಾ ಪವರ್ ಇಯರ್‌ಬಡ್ಸ್ ಲೈಟ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 662 ಪ್ರೊಸೆಸರ್‌ ಒಳಗೊಂಡಿರುವ ನೋಕಿಯಾ 5.4, ಹೆಚ್ಚು ವೇಗ, ಸುದೀರ್ಘ ಬ್ಯಾಟರಿ ಲೈಫ್, ಉತ್ತಮ ಇಮೇಜಿಂಗ್ ಮತ್ತು ಹೆಚ್ಚಿನ ಕ್ಷಮತೆಯನ್ನು ಒದಗಿಸುತ್ತದೆ. ಈ ಫೋನ್‌ನಲ್ಲಿ 48 ಎಂಪಿ ಕ್ವಾಡ್ ಕ್ಯಾಮೆರಾ (48ಎಂಪಿ+2ಎಂಪಿ+5ಎಂಪಿ+2ಎಂಪಿ) ಮತ್ತು 16ಎಂಪಿ ಮುಂಬದಿ ಕ್ಯಾಮೆರಾ ಇದೆ. ಬಳಕೆದಾರರು 21:9 ಸಿನಿಮ್ಯಾಟಿಕ್ ಗುಣಮುಟ್ಟದಲ್ಲಿ ಚಿತ್ರಗಳನ್ನು ಕ್ಲಿಕ್ಕಿಸಬಹುದಾಗಿದೆ. 6.39 ಇಂಚುಗಳ ಎಚ್‌ಡಿ+ ಪಂಚ್‌ಹೋಲ್ ಡಿಸ್‌ಪ್ಲೇ, 64ಜಿಬಿ ಸಂಗ್ರಹ ಸಾಮರ್ಥ್ಯದೊಂದಿಗೆ 4ಜಿಬಿ ರ್‍ಯಾಮ್‌ ಮತ್ತು 6ಜಿಬಿ ರ್‍ಯಾಮ್‌ ಎರಡು ಮಾದರಿಗಳಲ್ಲಿ ಫೋನ್‌ ಲಭ್ಯವಿದೆ. ನೋಕಿಯಾ 3.4 ಫೋನ್‌ನಲ್ಲಿ ಹೊಚ್ಚಹೊಸ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್‌ 460 ಪ್ರೊಸೆಸರ್‌, 6.39 ಇಂಚುಗಳ ಎಚ್‌ಡಿ+ಪಂಚ್‌ಹೋಲ್‌ ಡಿಸ್‌ಪ್ಲೇ ನೀಡಲಾಗಿದೆ. 64ಜಿಬಿ ಸಂಗ್ರಹ ಸಾಮರ್ಥ್ಯ, 4ಜಿಬಿ ರ್‍ಯಾಮ್‌ ಅಳವಡಿಸಲಾಗಿದ್ದು, 13ಎಂಪಿ ಕ್ಯಾಮೆರಾ (13ಎಂಪಿ+2ಎಂಪಿ+5ಎಂಪಿ) ಮತ್ತು ಸೆಲ್ಫಿಗಾಗಿ 8ಎಂಪಿ ಕ್ಯಾಮೆರಾ ಇದೆ. ಗೂಗಲ್ ಪಾಡ್‌ಕಾಸ್ಟ್ ಸಮನ್ವಿತವಾಗಿರುವ ನೋಕಿಯಾ 3.4 ಮೂಲಕ ನೀವು ಯಾವುದೇ ವೇಳೆಯಲ್ಲಿ, ಎಲ್ಲಿ ಬೇಕಾದರೂ ಆಲಿಸಲು ಅವಕಾಶ ಮಾಡಿಕೊಡುತ್ತದೆ. ಎರಡೂ ಫೋನ್‌ಗಳಲ್ಲಿ 4000ಎಂಎಎಚ್‌ ಬ್ಯಾಟರಿ ಇದ್ದು, ಎರಡು ದಿನಗಳವರೆಗೂ ಬ್ಯಾಟರಿ ಚಾರ್ಜ್‌ ಉಳಿಯುತ್ತದೆ. ಎಐ–ಬೆಂಬಲಿತ ಅಡಾಪ್ಟೀವ್‌ ಬ್ಯಾಟರಿ ತಂತ್ರಜ್ಞಾನವು ಹೆಚ್ಚು ಸ್ಮಾರ್ಟ್ ಆ್ಯಪ್ ಬಳಕೆಗೆ ಅನುಕೂಲವಾಗುತ್ತದೆ. ಜೇಬಿನಲ್ಲಿ ಇಟ್ಟುಕೊಳ್ಳಲು ಮತ್ತು ಸುಲಭವಾಗಿ ಹಿಡಿದುಕೊಳ್ಳಲು ಅನುಕೂಲವಾಗುವಂತೆ ಫೋನ್‌ ವಿನ್ಯಾಸಗೊಳಿಸಲಾಗಿದೆ. ಈ ಫೋನ್‌ಗಳು ಆ್ಯಂಡ್ರಾಯ್ಡ್ 11 ಮತ್ತು ನಂತರದ ತಂತ್ರಜ್ಞಾನಕ್ಕೆ ಸಜ್ಜಾಗಿವೆ. ಮೂರು ವರ್ಷಗಳ ಕಾಲ ಮಾಸಿಕ ಭದ್ರತಾ ಅಪ್‌ಡೇಟ್‌ಗಳು ಮತ್ತು ಎರಡು ವರ್ಷಗಳ ಸಾಫ್ಟ್ವೇರ್ ಅಪ್‌ಗ್ರೇಡ್‌ನೊಂದಿಗೆ, ಹೆಚ್ಚು ಸುಭದ್ರ ಹಾಗೂ ಹೆಚ್ಚಿನ ಅವಧಿಗೆ ಅಪ್‌ಡೇಟ್ ಆಗಿರಲು ಅವಕಾಶವಿದೆ. ನೋಕಿಯಾ ಪವರ್ ಇಯರ್‌ಬಡ್ ಲೈಟ್: ಪ್ರಿಮಿಯಮ್ ನರ‍್ಯಾಡಿಕ್ ವಿನ್ಯಾಸವನ್ನು ಹೊಂದಿದ್ದು, ಜೇಬಿನಲ್ಲಿ ಇಡಬಹುದಾದಷ್ಟು ಗಾತ್ರದ ಚಾರ್ಜಿಂಗ್ ಕೇಸ್‌ಗಳನ್ನು ಹೊಂದಿರುತ್ತದೆ. ಇದು ಸಾರ್ವತ್ರಿಕ ಬ್ಲೂಟೂತ್ ಹೊಂದಾಣಿಕೆಗೆ ಅವಕಾಶ ಮಾಡಿಕೊಡುತ್ತದೆ. 35 ಗಂಟೆಗಳ ನಿರಂತರ ಪ್ಲೇಟೈಮ್ ಹೊಂದಿದ್ದು, ಚಿಂತೆ ಇಲ್ಲದೆ ಒಳಾಂಗಣ ಅಥವಾ ಹೊರಾಂಗಣದಲ್ಲೂ, ಮಳೆಯಲ್ಲಿಯೂ ಸಂಗೀತವನ್ನು ಆಸ್ವಾದಿಸಲು ಅವಕಾಶ ಮಾಡಿಕೊಡಲಿದೆ. ಐಪಿಎಕ್ಸ್7 ನೀರು ಪ್ರತಿರೋಧ ರೇಟಿಂಗ್‌ನೊಂದಿಗೆ ಬೆವರು ಮತ್ತು ನೀರಿನ ಹನಿಗಳಿಂದ ತೊಡಕಿಲ್ಲದೇ ಮುಂದುವರಿಯಲಿದೆ. ಜಿಯೊ ಸಂಪರ್ಕ ಹೊಂದಿರುವ ಗ್ರಾಹಕರಿಗೆ ನೋಕಿಯಾ ಫೋನ್‌ಗಳ ಖರೀದಿಯೊಂದಿಗೆ 4000 ರೂಪಾಯಿ ಮೌಲ್ಯದ ವಿಶೇಷ ಆಫರ್‌ಗಳು ಸಿಗಲಿವೆ. ಫೆಬ್ರುವರಿ 10ರಿಂದ ಬುಕ್ಕಿಂಗ್‌ ಮಾಡಬಹುದಾಗಿದೆ. ನಿಗದಿತ ಬೆಲೆ: * ನೋಕಿಯಾ 5.4 ಫೋನ್‌: ₹13,999 ಮತ್ತು ₹15,499 * ನೋಕಿಯಾ 3.4 ಫೋನ್‌: ₹11,999 * ನೋಕಿಯಾ ಪವರ್‌ ಇಯರ್‌ಬಡ್ಸ್‌ ಲೈಟ್: ₹3,599 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.