ವಿವೊ ವೈ ಸರಣಿ ಸ್ಮಾರ್ಟ್‌ಫೋನ್ ದರ ಏರಿಕೆ ಬೆಂಗಳೂರು: ವಿವೊ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ನೂತನ ವೈ ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆಯಾಗಿದೆ. ವಿವೋ Y20A ಮತ್ತು Y20G ಫೋನ್ ಬೆಲೆಯಲ್ಲಿ ₹1,000 ವರೆಗೆ ಏರಿಕೆಯಾಗಿದೆ. ಪರಿಷ್ಕೃತ ದರ ವಿವೊ ಅಧಿಕೃತ ವೆಬ್‌ಸೈಟ್ ಮತ್ತು ಅಮೆಜಾನ್‌ನಲ್ಲಿ ಕಾಣಿಸಿಕೊಂಡಿದೆ. ಹೊಸ ದರ ಎಷ್ಟಿದೆ? ವಿವೊ Y20A ಮತ್ತು Y20G ನೂತನ ದರ ಇಲ್ಲಿದೆ. ವಿವೊ Y20A ಬೆಲೆ 3 + 64 ಮಾದರಿ ದರ ಪ್ರಸ್ತುತ ₹11,990 ಇದೆ. ವಿವೊ Y20G ಸ್ಮಾರ್ಟ್‌ಫೋನ್ ದರ ₹1,000 ಏರಿಕೆಯಾಗಿದ್ದು, 4 + 64 ಮಾದರಿ ದರ ಈಗ ₹13,990 ಇದೆ. ಅಲ್ಲದೆ, 6 + 128 ಮಾದರಿಗೆ ಈಗ ದೇಶದಲ್ಲಿ ಬೆಲೆ ಏರಿಕೆ ಬಳಿಕ ₹15,990 ಇದೆ. Y53s: ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ವಿವೊ ಇತ್ತೀಚೆಗಷ್ಟೇ ವಿವೊ Y1s ಮತ್ತು ವಿವೊ Y12s ಸ್ಮಾರ್ಟ್‌ಫೋನ್ ಬೆಲೆಯನ್ನು ವಿವೊ ₹500 ಏರಿಕೆ ಮಾಡಿತ್ತು. G20: ಆಕರ್ಷಕ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ನೋಕಿಯಾ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.