ನಥಿಂಗ್ ಇಯರ್ 1 ಇಯರ್‌ಫೋನ್ ಬೆಲೆ ವಿವರ ಬಿಡುಗಡೆ: ಜುಲೈ 27ರಂದು ಮಾರುಕಟ್ಟೆಗೆ ಬೆಂಗಳೂರು: ‘ನಥಿಂಗ್ ಇಯರ್ 1’ ನೂತನ ಇಯರ್‌ಫೋನ್ ಜುಲೈ 27ರಂದು ದೇಶದ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಫ್ಲಿಪ್‌ಕಾರ್ಟ್ ಮೂಲಕ ನೂತನ ಟ್ರೂ ವೈರ್‌ಲೆಸ್ ಇಯರ್‌ಫೋನ್ ಲಭ್ಯವಾಗಲಿದ್ದು, ₹5,999 ರೂ. ದರ ಇರಲಿದೆ. ಒನ್‌ಪ್ಲಸ್ ಸಹ ಸಂಸ್ಥಾಪಕ ಕಾರ್ಲ್ ಪೈ ಅವರಿಂದ ಹೊಸ ಉತ್ಪನ್ನ ‘ನಥಿಂಗ್’ ಮಾರುಕಟ್ಟೆ ಪ್ರವೇಶಿಸುತ್ತಿದೆ. ಬಿಡುಗಡೆಗೂ ಮೊದಲೇ ಫ್ಲಿಪ್‌ಕಾರ್ಟ್‌ನಲ್ಲಿ ಹೊಸ ಇಯರ್‌ಫೋನ್ ದರ ವಿವರ ಪ್ರಕಟಿಸಲಾಗಿದೆ. ನೂತನ ನಥಿಂಗ್ ಇಯರ್ 1 ಇಯರ್‌ಫೋನ್‌ನಲ್ಲಿ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಸೌಲಭ್ಯವೂ ಇದ್ದು, ದೇಶದಲ್ಲಿ ಸ್ಪರ್ಧಾತ್ಮಕ ದರದಲ್ಲಿ ಮಾರುಕಟ್ಟೆ ಪ್ರವೇಶಿಸುತ್ತಿದೆ. Y53s: ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ವಿವೊ ಈಗಾಗಲೇ ಒಪ್ಪೋ, ರಿಯಲ್‌ಮಿ ಮತ್ತು ಒನ್‌ಪ್ಲಸ್ ಬಿಡುಗಡೆ ಮಾಡಿರುವ ಇಯರ್‌ಫೋನ್ ಜತೆಗೆ ನಥಿಂಗ್ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ. 2: ದೇಶದ ಮಾರುಕಟ್ಟೆಗೆ ಹೊಸ ಫೋನ್ ಪರಿಚಯಿಸುತ್ತಿದೆ ಒನ್‌ಪ್ಲಸ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.