2: ದೇಶದ ಮಾರುಕಟ್ಟೆಗೆ ಹೊಸ ಫೋನ್ ಪರಿಚಯಿಸುತ್ತಿದೆ ಒನ್‌ಪ್ಲಸ್ ಬೆಂಗಳೂರು: ಒನ್‌ಪ್ಲಸ್ ದೇಶದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಒಂದನ್ನು ಪರಿಚಯಿಸಲು ಮುಂದಾಗಿದೆ. ಒನ್‌ಪ್ಲಸ್ ನಾರ್ಡ್ ಸರಣಿಯಲ್ಲಿ ಹೊಸ ನಾರ್ಡ್-2 5G ಸ್ಮಾರ್ಟ್‌ಫೋನ್ ಕುರಿತು ಕಂಪನಿ ಘೋಷಿಸಿದ್ದು, ಅಮೆಜಾನ್ ಮೂಲಕ ಜುಲೈ 22ಕ್ಕೆ ಬಿಡುಗಡೆಯಾಗುತ್ತಿದೆ ಎಂದು ಹೇಳಿದೆ. ನೂತನ ಒನ್‌ಪ್ಲಸ್ ನಾರ್ಡ್-2 5G ಫೋನ್, ಮೀಡಿಯಾಟೆಕ್ ಪ್ರೊಸೆಸರ್ ಸಹಿತ ಬರುತ್ತಿದೆ ಎನ್ನಲಾಗಿದೆ. ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಹೊಸ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆ ಕುರಿತು ಪ್ರಕಟಿಸಲಾಗಿದೆ. ಆದರೆ ಹೊಸ ಒನ್‌ಪ್ಲಸ್ ನಾರ್ಡ್-2 5G ಫೋನ್ ತಾಂತ್ರಿಕ ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರವನ್ನು ಕಂಪನಿ ಬಹಿರಂಗಪಡಿಸಿಲ್ಲ. ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುವ 9 ಆ್ಯಪ್‌ಗಳ ತೆಗೆದುಹಾಕಿದ ಗೂಗಲ್ ಜುಲೈ 26 ಮತ್ತು 27ರಂದು ಅಮೆಜಾನ್ ಪ್ರೈಮ್ ಡೇ ವಿಶೇಷ ಆಫರ್ ಸೇಲ್ ಅನ್ನು ದೇಶದಲ್ಲಿ ನಡೆಸುವ ಸಾಧ್ಯತೆಯಿದೆ. ಅದೇ ಸಂದರ್ಭದಲ್ಲಿ ಹೊಸ ಒನ್‌ಪ್ಲಸ್ ಫೋನ್ ಖರೀದಿಸುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ M32: ದೊಡ್ಡ ಬ್ಯಾಟರಿಯ ಸ್ಮಾರ್ಟ್ ವೈಶಿಷ್ಟ್ಯಗಳ ಫೋನ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.