Y53s: ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ವಿವೊ ಬೆಂಗಳೂರು: ವಿವೊ, ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಆಕರ್ಷಕ ಮಾದರಿಯೊಂದನ್ನು ಬಿಡುಗಡೆ ಮಾಡಿದೆ. ವಿವೊ ವೈ ಸರಣಿಯಲ್ಲಿ Y53s ಪರಿಚಯಿಸಲ್ಪಟ್ಟಿದ್ದು, ಮೀಡಿಯಾಟೆಕ್ ಹಿಲಿಯೊ ಪ್ರೊಸೆಸರ್ ಮತ್ತು 64 ಮೆಗಾಪಿಕ್ಸೆಲ್ ಸಹಿತ ತ್ರಿವಳಿ ಕ್ಯಾಮರಾ ವ್ಯವಸ್ಥೆಯಿದೆ. ವಿವೊ Y53s ತಾಂತ್ರಿಕ ವೈಶಿಷ್ಟ್ಯಗಳು ನೂತನ ವಿವೊ Y53s, 8 + 128 ಹಾಗೂ 256 ಸ್ಟೋರೇಜ್ ಮಾದರಿ ಹೊಂದಿದೆ. ಹಸಿರು ಮತ್ತು ನೇರಳೆ ಬಣ್ಣದಲ್ಲಿ ಹೊಸ ವಿವೊ Y53s ದೊರೆಯಲಿದ್ದು, ಭಾರತದಲ್ಲಿ ಲಭ್ಯತೆ ಮತ್ತು ಬೆಲೆ ವಿವರವನ್ನು ಕಂಪನಿ ಬಹಿರಂಗಪಡಿಸಿಲ್ಲ. ಚೀನಾದ ಮಾರುಕಟ್ಟೆಯಲ್ಲಿ ವಿವೊY53s, 1,799 ದರ ಹೊಂದಿದೆ, ಅಂದರೆ ದೇಶದಲ್ಲಿಅಂದಾಜು ₹20,500 ಆಗಲಿದೆ. ಆಂಡ್ರಾಯ್ಡ್ 11 ಆಧಾರಿತ ಫನ್‌ಟಚ್‌ ಓಎಸ್ 11.1, 6.58 ಇಂಚಿನ ಫುಲ್ ಎಚ್‌ಡಿ+ ಡಿಸ್‌ಪ್ಲೇ ಇದರಲ್ಲಿದೆ. ಮೀಡಿಯಾಟೆಕ್ ಹಿಲಿಯೊ G80 ಪ್ರೊಸೆಸರ್, 5000mAh ಬ್ಯಾಟರಿ ಹೊಸ ವಿವೊ Y53s ಫೋನ್‌ನಲ್ಲಿದೆ. 2: ದೇಶದ ಮಾರುಕಟ್ಟೆಗೆ ಹೊಸ ಫೋನ್ ಪರಿಚಯಿಸುತ್ತಿದೆ ಒನ್‌ಪ್ಲಸ್ ಅಲ್ಲದೆ, 64+2+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ, ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಕೂಡ ಇದೆ. ದೇಶದ ಮಾರುಕಟ್ಟೆಗೆ ನಾಯ್ಸ್ ಕೊಲೋಫಿಟ್ ಕ್ಯೂಬ್ ಸ್ಮಾರ್ಟ್‌ವಾಚ್ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.