ಗೇಮಿಂಗ್ ಪ್ರಿಯರಿಗೆ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದ ಏಸಸ್ ಬೆಂಗಳೂರು: ಕಂಪ್ಯೂಟರ್ ಗೇಮಿಂಗ್ ವೈಶಿಷ್ಟ್ಯಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಬಯಸುವವರಿಗೆ ಏಸಸ್ ಹೊಸ ಆಯ್ಕೆಗಳನ್ನು ಒದಗಿಸುತ್ತಿದೆ. ಏಸಸ್ ರಾಗ್ ಸ್ಮಾರ್ಟ್‌ಫೋನ್ ಹೊಸದಾಗಿ ರಾಗ್ ಫೋನ್ 5s ಸರಣಿಯನ್ನು ಕಂಪನಿ ಪರಿಚಯಿಸಿದೆ. ಏಸಸ್ ರಾಗ್ ಫೋನ್ 5 ಮತ್ತು ರಾಗ್ ಫೋನ್ 5s ಪ್ರೊ ಅನ್ನು ಏಸಸ್ ಬಿಡುಗಡೆ ಮಾಡುತ್ತಿದೆ. ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ 5G ಸಂಪರ್ಕ ಮತ್ತು ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 888 ಪ್ಲಸ್ ಪ್ರೊಸೆಸರ್ ಇದೆ. 6.78 ಇಂಚಿನ ಡಿಸ್‌ಪ್ಲೇ, 18GB LPDDR5 ವರೆಗಿನ ಏಸಸ್ ಫೋನ್‌ಗಳ ವಿಶೇಷತೆಯಾಗಿದೆ. 128 , 256 , ಮತ್ತು 512 GBವರೆಗಿನ ಸ್ಟೋರೇಜ್, ಆಂಡ್ರಾಯ್ಡ್ 11 ಆಧಾರಿತ ರಾಗ್ ಯುಐ ಇರಲಿದೆ. Y53s: ತ್ರಿವಳಿ ಕ್ಯಾಮರಾ ಸಹಿತ ನೂತನ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆ ಏಸಸ್ ನೂತನ ಸ್ಮಾರ್ಟ್‌ಫೋನ್‌ಗಳು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಕಾಣಿಸಿಕೊಂಡಿದ್ದು, ದೇಶದ ಮಾರುಕಟ್ಟೆಯಲ್ಲಿ ಲಭ್ಯತೆ ಮತ್ತು ಬೆಲೆ ವಿವರ ಲಭ್ಯವಾಗಿಲ್ಲ. ಶಿಯೋಮಿ ರೆಡ್ಮಿಬುಕ್ ಲ್ಯಾಪ್‌ಟಾಪ್ ದೇಶದಲ್ಲಿ ಬಿಡುಗಡೆ: ಬೆಲೆ ವಿವರ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.