X60: ದೇಶದಲ್ಲಿ ವಿವೊ ಸ್ಮಾರ್ಟ್‌ಫೋನ್ ಬೆಲೆ ₹3000 ಇಳಿಕೆ ಬೆಂಗಳೂರು: ವಿವೋ ಪ್ರೀಮಿಯಂ ಎಕ್ಸ್ ಸರಣಿಯಲ್ಲಿ ಬಿಡುಗಡೆ ಮಾಡಿದ್ದ ನೂತನ ಫೋನ್ ಒಂದರ ಬೆಲೆಯನ್ನು ದೇಶದಲ್ಲಿ ಇಳಿಕೆ ಮಾಡಿದೆ. ವಿವೊ ಸರಣಿಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ X60 ಸ್ಮಾರ್ಟ್‌ಫೋನ್ ಬೆಲೆ ದೇಶದಲ್ಲಿ ₹3,000 ದರ ಇಳಿಕೆಯಾಗಿದೆ. ಇದೇ ಸರಣಿಯಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದ್ದ ವಿವೊ X60 ಮತ್ತು ವಿವೊ X60 + ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ವಿವೊ X60:ವಿವೊ ಎಕ್ಸ್ ಸರಣಿಯ ಸ್ಮಾರ್ಟ್‌ಫೋನ್ X60 ದರ, 8 + 128 ಮಾದರಿಗೆ ಬೆಲೆ ಇಳಿಕೆಯ ಬಳಿಕ ₹34,990 ದರವಿದೆ. ಈ ಮೊದಲು ₹37,990 ದರವಿತ್ತು. ಅಲ್ಲದೆ, 12 + 256 ಮಾದರಿಗೆ ₹39,990 ದರವಿದೆ. ಈ ಆವೃತ್ತಿಗೆ ₹2,000 ದರ ಕಡಿತವನ್ನು ವಿವೊ ದೇಶದಲ್ಲಿ ಪ್ರಕಟಿಸಿದೆ. ವಿವೊ X60 ಸ್ಮಾರ್ಟ್‌ಫೋನ್‌ನಲ್ಲಿ 6.56 ಇಂಚಿನ ಫುಲ್‌ಎಚ್‌ಡಿ+ ಡಿಸ್‌ಪ್ಲೇ, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 870 ಪ್ರೊಸೆಸರ್ ಇದೆ. ಅಲ್ಲದೆ, ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್ ಕ್ಯಾಮರಾ ಜತೆಗೆ 13+13 ಮೆಗಾಪಿಕ್ಸೆಲ್ ಕ್ಯಾಮರಾ, 32 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದೆ. ಉಳಿದಂತೆ, 4,200mAh ಬ್ಯಾಟರಿ ಇದರ ವಿಶೇಷತೆಯಾಗಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ: ಮಡಚುವ ಹೊಸ 5ಜಿ ಫೋನ್‌ಗಳು, ವಾಚ್‌, ಬಡ್ಸ್ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.