A48: ಬಜೆಟ್ ದರದ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆ ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಐಟೆಲ್ ನೂತನ ಮಾದರಿಯನ್ನು ಪರಿಚಯಿಸಿದೆ. ಬಜೆಟ್ ದರದಲ್ಲಿ ಐಟೆಲ್ ಹೊಸದಾಗಿ A48 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, ವಾಟರ್‌ಡ್ರಾಪ್ ನಾಚ್ ವಿನ್ಯಾಸದ ಡಿಸ್‌ಪ್ಲೇ ಹೊಂದಿದೆ. ತಾಂತ್ರಿಕ ವೈಶಿಷ್ಟ್ಯ ಐಟೆಲ್ A48 ಸ್ಮಾರ್ಟ್‌ಫೋನ್‌ನಲ್ಲಿ, 2 + 32 ಸ್ಟೋರೇಜ್ ಇದೆ. ಜತೆಗೆ 3,000mAh ಬ್ಯಾಟರಿ ಕೂಡ ಇದರಲ್ಲಿದೆ. ಆಂಡ್ರಾಯ್ಡ್ 10 ಆಪರೇಟಿಂಗ್ ವ್ಯವಸ್ಥೆ, ಫೇಸ್ ಮತ್ತು ಫಿಂಗರ್‌ಪ್ರಿಂಟ್ ಲಾಕ್ ಹೊಂದಿದೆ. X60: ದೇಶದಲ್ಲಿ ವಿವೊ ಸ್ಮಾರ್ಟ್‌ಫೋನ್ ಬೆಲೆ ₹3000 ಇಳಿಕೆ ಐಟೆಲ್ A48, 2 + 32 ಮಾದರಿಗೆ ದೇಶದಲ್ಲಿ ₹6,399 ದರವಿದೆ ಎಂದು ಕಂಪನಿ ಹೇಳಿದೆ. ಕಪ್ಪು, ಹಸಿರು ಮತ್ತು ನೇರಳೆ ಬಣ್ಣದಲ್ಲಿ ನೂತನ ಸ್ಮಾರ್ಟ್‌ಫೋನ್ ದೊರೆಯಲಿದೆ. ಆಂಡ್ರಾಯ್ಡ್ ಫೋನ್‌ಗಳ 'ಸ್ಮಾರ್ಟ್' ವೈಶಿಷ್ಟ್ಯಗಳು: ಹೇಗೆ ಬಳಸುವುದು? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.