ಅತಿ ಕಡಿಮೆ ಬೆಲೆಯ ಜಿಯೋ ಫೋನ್ ನೆಕ್ಸ್ಟ್: ಮುಂದಿನ ವಾರ ಪ್ರೀ ಬುಕ್ಕಿಂಗ್‌ ಗೂಗಲ್ ಸಹಯೋಗದಲ್ಲಿರಿಲಯನ್ಸ್ ಕಂಪನಿಅತೀ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಹೊರತರುತ್ತಿದ್ದು, ಬರುವ ಗಣೇಶ ಹಬ್ಬಕ್ಕೆ ಬಿಡುಗಡೆ ಮಾಡುವುದಾಗಿ ಕಂಪನಿತಿಳಿಸಿದೆ. ಕಡಿಮೆ ಬೆಲೆಯ ಈ ಫೋನ್‌ಗೆ ಜಿಯೋ ನೆಕ್ಸ್ಟ್ ಎಂದು ಹೆಸರಿಡಲಾಗಿದೆ. ಮುಂದಿನ ವಾರ ಪ್ರೀ ಬುಕ್ಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಕಂಪನಿ ತಿಳಿಸಿದೆ. ಈ ಸ್ಮಾರ್ಟ್‌ಫೋನಿನ ಯಾವುದೇ ವಿಶೇಷತೆಗಳನ್ನು ಜಿಯೊಇನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ ಒಂದಷ್ಟು ಮಾಹಿತಿಗಳು ಇಂಟರ್‌ನೆಟ್‌ನಲ್ಲಿ ಸೋರಿಕೆಯಾಗಿವೆ. ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 11 ಆವೃತ್ತಿಯಲ್ಲಿ ಲಭ್ಯವಿದ್ದು, 2 ಜಿಬಿ ಮತ್ತು 3 ಜಿಬಿ ಗಳಲ್ಲಿ ಇರಲಿದೆ. 16 ಜಿಬಿ ಮತ್ತು 32 ಜಿಬಿ ಸ್ಟೊರೇಜ್, 5.5-ಇಂಚಿನ ಡಿಸ್‌ಪ್ಲೇ, 2500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದರಲ್ಲಿ 13 ಮೆಗಾಪಿಕ್ಸೆಲ್ ಮತ್ತು 8 ಮೆಗಾಪಿಕ್ಸೆಲ್‌ ಮಾದರಿಯ ಎರಡು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರ ಬೆಲೆ ಕೇವಲ ₹3,499 ಎಂಬ ಮಾಹಿತಿ ಕೂಡ ಸೋರಿಕೆಯಾಗಿದೆ. ಮುಂದಿನ ವಾರದಲ್ಲಿ ಕಂಪನಿಯು ಅಧಿಕೃತವಾಗಿ ಫೋನಿನವಿಶೇಷತೆ, ಬೆಲೆ ಮತ್ತು ವೈಶಿಷ್ಟ್ಯಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.