10 : ಶಿಯೋಮಿ ನೂತನ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆ ಬೆಂಗಳೂರು: ಶಿಯೋಮಿ, ರೆಡ್ಮಿ ಸ್ಮಾರ್ಟ್‌ಫೋನ್ ಸರಣಿಯಲ್ಲಿ ನೂತನ ಮಾದರಿಯನ್ನು ದೇಶದಲ್ಲಿ ಬಿಡುಗಡೆ ಮಾಡಿದೆ. ಶಿಯೋಮಿ ರೆಡ್ಮಿ 10 ಪ್ರೈಮ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಕಳೆದ ವರ್ಷ ಬಿಡುಗಡೆಯಾಗಿದ್ದ ರೆಡ್ಮಿ 9 ಪ್ರೈಮ್ ಮಾದರಿಯ ಪರಿಷ್ಕೃತ ಆವೃತ್ತಿಯಂತೆ ಕಾಣಿಸುತ್ತಿದೆ. ಬೆಲೆ ಎಷ್ಟಿದೆ? ರೆಡ್ಮಿ 10 ಪ್ರೈಮ್, 4 + 64 ಮಾದರಿಗೆ ₹12,499 ದರವಿದೆ. 6 + 128 ಆವೃತ್ತಿಗೆ ₹14,499 ಬೆಲೆ ಇದೆ. ಸೆ. 7ರಿಂದ ಅಮೆಜಾನ್, ಎಂಐ ಸ್ಟೋರ್ ಮತ್ತು ಆನ್‌ಲೈನ್ ಮೂಲಕ ದೊರೆಯಲಿದೆ. ಎಚ್‌ಡಿಎಫ್‌ಸಿ ಕಾರ್ಡ್ ಬಳಕೆಗೆ ₹750 ಡಿಸ್ಕೌಂಟ್ ಕೂಡ ದೊರೆಯಲಿದೆ. ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ಬೆಲೆ ದೇಶದಲ್ಲಿ ₹1,500ವರೆಗೆ ಏರಿಕೆ ರೆಡ್ಮಿ 10 ಪ್ರೈಮ್ ಶಿಯೋಮಿ ರೆಡ್ಮಿ 10 ಪ್ರೈಮ್ ಫೋನ್, ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮರಾ ಜತೆಗೆ, 8+2 ಮೆಗಾಪಿಕ್ಸೆಲ್ ಕ್ಯಾಮರಾ ಇದ್ದು, 8 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದೆ. 6000mAh ಬ್ಯಾಟರಿ ಬೆಂಬಲ ಕೂಡ ಇದರಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.