ದೇಶದ ಮಾರುಕಟ್ಟೆಗೆ ನೂತನ ಸ್ಮಾರ್ಟ್‌ವಾಚ್ ಪರಿಚಯಿಸಿದ ನಾಯ್ಸ್ ಬೆಂಗಳೂರು: ಫಿಟ್ನೆಸ್ ಕ್ರೇಜ್ ಮತ್ತು ಸ್ಮಾರ್ಟ್ ಫೀಚರ್ ಬಯಸುವ ಯುವಜನತೆಯನ್ನು ಗಮನದಲ್ಲಿರಿಸಿಕೊಂಡು ನಾಯ್ಸ್, ದೇಶದಲ್ಲಿ ಆಕರ್ಷಕ ಮಾದರಿಯ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ. ನಾಯ್ಸ್‌ಫಿಟ್ ಕೋರ್ ಸ್ಮಾರ್ಟ್‌ವಾಚ್, ಏಳು ದಿನಗಳ ಬ್ಯಾಟರಿ ಬಾಳಿಕೆ ಹೊಂದಿರುತ್ತದೆ ಎಂದು ಕಂಪನಿ ಹೇಳಿದೆ. ಆಂಡ್ರಾಯ್ಡ್ ಮತ್ತು ಐಫೋನ್ ಜತೆಗೆ ನೂತನ ನಾಯ್ಸ್‌ಫಿಟ್ ಸ್ಮಾರ್ಟ್‌ವಾಚ್ ಬಳಸಬಹುದಾಗಿದೆ. ಬೆಲೆ ಮತ್ತು ಲಭ್ಯತೆ ಹೊಸ ನಾಯ್ಸ್‌ಫಿಟ್ ಕೋರ್ ಸ್ಮಾರ್ಟ್‌ವಾಚ್, ಭಾರತೀಯ ಮಾರುಕಟ್ಟೆಯಲ್ಲಿ ₹2,999 ದರ ಹೊಂದಿದೆ. ಕಂಪನಿ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ನೂತನ ಸ್ಮಾರ್ಟ್‌ವಾಚ್ ದೊರೆಯಲಿದೆ. 10 : ಶಿಯೋಮಿ ನೂತನ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆ ನಾಯ್ಸ್‌ಫಿಟ್ ಕೋರ್ ಸ್ಮಾರ್ಟ್‌ವಾಚ್, 1.28 ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ ಹೊಂದಿದೆ. ಎರಡು ಆಕರ್ಷಕ ಬಣ್ಣಗಳು, 13 ವಿವಿಧ ಸ್ಪೋರ್ಟ್ಸ್ ಮೋಡ್ ಆಯ್ಕೆ ಕೂಡ ದೊರೆಯಲಿದೆ. ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ಬೆಲೆ ದೇಶದಲ್ಲಿ ₹1,500ವರೆಗೆ ಏರಿಕೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.