ಬಜೆಟ್ ದರದ ಸ್ಮಾರ್ಟ್‌ಫೋನ್ ಪರಿಚಯಿಸಿದ ಐಟೆಲ್ ಬೆಂಗಳೂರು: ದೇಶದ ಬಜೆಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಗಮನದಲ್ಲಿರಿಸಿಕೊಂಡು ಐಟೆಲ್ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಐಟೆಲ್ ‘ವಿಶನ್ 2ಎಸ್’ ಬಜೆಟ್ ದರದ ಸ್ಮಾರ್ಟ್‌ಫೋನ್, ₹6,999 ಕ್ಕೆ ದೊರೆಯಲಿದೆ. ಇದರಿಂದ ಬಜೆಟ್ ದರಕ್ಕೆ ಹೊಸ ಫೀಚರ್‌ಗಳಿರುವ ಫೋನ್ ಖರೀದಿಸಲು ಬಯಸುವವರಿಗೆ ಅನುಕೂಲವಾಗಲಿದೆ. ಐಟೆಲ್ ‘ವಿಶನ್ 2ಎಸ್’ ತಾಂತ್ರಿಕ ವೈಶಿಷ್ಟ್ಯ ನೂತನ ಐಟೆಲ್ ‘ವಿಶನ್ 2ಎಸ್’, 6.52 ಇಂಚಿನ ಎಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, 2 + 32 ಮೆಮೊರಿ ಹೊಂದಿದೆ. ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ಬೆಲೆ ದೇಶದಲ್ಲಿ ₹1,500ವರೆಗೆ ಏರಿಕೆ ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ + ಕ್ಯಾಮರಾ ಇದ್ದು, 5 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದರಲ್ಲಿದೆ. ಪರ್ಪಲ್, ಬ್ಲೂ ಮತ್ತು ಡೀಪ್ ಬ್ಲೂ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ನೂತನ ಫೋನ್ ದೊರೆಯಲಿದ್ದು, ಆಂಡ್ರಾಯ್ಡ್ 11 ಗೊ ಆವೃತ್ತಿ ಮೂಲಕ ಕಾರ್ಯನಿರ್ವಹಿಸುತ್ತದೆ. 5000mAh ಬ್ಯಾಟರಿ ಇದರಲ್ಲಿದ್ದು, ಹೆಚ್ಚಿನ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿದೆ. ದೇಶದಲ್ಲಿ ಶಿಯೋಮಿ ರೆಡ್ಮಿ ಸ್ಮಾರ್ಟ್‌ಫೋನ್ ಬೆಲೆ ಏರಿಕೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.