13: ಸೆ. 14ರಂದು ಆ್ಯಪಲ್ ಇವೆಂಟ್, ಹೊಸ ಐಫೋನ್ ಬಿಡುಗಡೆಗೆ ಸಿದ್ಧತೆ ಬೆಂಗಳೂರು: ಬಹುನಿರೀಕ್ಷಿತ ಆ್ಯಪಲ್ ಇವೆಂಟ್‌ಗೆ ದಿನ ನಿಗದಿಯಾಗಿದೆ. ಸೆ. 14ರಂದು ಮಂಗಳವಾರ ಆ್ಯಪಲ್ ಇವೆಂಟ್ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10:30 ಕ್ಕೆ ಆ್ಯಪಲ್ ಹೊಸ ಐಫೋನ್ ಸರಣಿ ಬಿಡುಗಡೆ ಕಾರ್ಯಕ್ರಮ ಆರಂಭವಾಗಲಿದೆ. ಆ್ಯಪಲ್, ಹೊಸದಾಗಿ ಐಫೋನ್ 13, ಆ್ಯಪಲ್ ವಾಚ್ ಸಿರೀಸ್ 7 ಮತ್ತು ಏರ್‌ಪಾಡ್ಸ್ 3 ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಜತೆಗೆ ಆ್ಯಪಲ್ ನೂತನ ಐಓಎಸ್ 15, ಮ್ಯಾಕ್‌ಓಎಸ್, ಐಪ್ಯಾಡ್ ಓಎಸ್, ವಾಚ್ ಓಎಸ್ ಕೂಡ ಬಳಕೆದಾರರಿಗೆ ಶೀಘ್ರದಲ್ಲೇ ದೊರೆಯಲಿದೆ. ಕೋವಿಡ್ ನಿಯಮಗಳಿಂದಾಗಿ ಈ ಬಾರಿ ಕೂಡ ಆ್ಯಪಲ್ ಇವೆಂಟ್ ಕ್ಯಾಲಿಫೋರ್ನಿಯಾದಿಂದ ಆನ್‌ಲೈನ್‌ ಸ್ಟ್ರೀಮಿಂಗ್‌ಗೆ ಮಾತ್ರ ಸೀಮಿತವಾಗಿರಲಿದೆ. ದೇಶದ ಮಾರುಕಟ್ಟೆಗೆ ನೂತನ ಸ್ಮಾರ್ಟ್‌ವಾಚ್ ಪರಿಚಯಿಸಿದ ನಾಯ್ಸ್ ಆ್ಯಪಲ್ ಇವೆಂಟ್ ಕುರಿತು ಈಗಾಗಲೇ ಆಹ್ವಾನ ಕಳುಹಿಸಿದ್ದು, ಆ್ಯಪಲ್ ಇವೆಂಟ್ ಪೇಜ್ ಮತ್ತು, ಯೂಟ್ಯೂಬ್ ಮೂಲಕವೂ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. 10 : ಶಿಯೋಮಿ ನೂತನ ಸ್ಮಾರ್ಟ್‌ಫೋನ್ ದೇಶದಲ್ಲಿ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.