F3 : ಗೇಮಿಂಗ್ ಪ್ರಿಯರಿಗೆ ಬಂತು ಹೊಸ ಸ್ಮಾರ್ಟ್‌ಫೋನ್ ಬೆಂಗಳೂರು: ಸ್ಮಾರ್ಟ್‌ಫೋನ್ ಗೇಮಿಂಗ್ ಪ್ರಿಯರಿಗಾಗಿ ಪೋಕೊ, ದೇಶದಲ್ಲಿ ಆಕರ್ಷಕ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಿದೆ. ವಿಶೇಷ ಗೇಮಿಂಗ್ ಫೀಚರ್ಸ್ ಮತ್ತು ಟ್ರಿಗರ್ಸ್ ಸಹಿತ ಪೋಕೊ F3 ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 1200 ಪ್ರೊಸೆಸರ್ ಹಾಗೂ 120Hz ರಿಫ್ರೆಶ್ ರೇಟ್ ಹೊಂದಿದೆ. ಪೋಕೊ F3 ಬೆಲೆ ವಿವರ ಹೊಸ ಪೋಕೊ F3 , 6 + 128 ಸ್ಟೋರೇಜ್ ಹೊಂದಿರುವ ಮಾದರಿಗೆ ದೇಶದಲ್ಲಿ ₹26,999 ದರ ಇದ್ದು, 8 + 128 ಸ್ಟೋರೇಜ್ ಆವೃತ್ತಿಗೆ 28,999 ದರ ಹಾಗೂ 8 + 256 ಮಾದರಿಗೆ ₹30,999 ದರವಿದೆ. ಆರಂಭಿಕ ಕೊಡುಗೆಯಾಗಿ ಎಲ್ಲ ಮಾದರಿಗಳ ಮೇಲೆ ಕೂಡ ಪೋಕೊ ತಲಾ ₹1,000 ಡಿಸ್ಕೌಂಟ್ ನೀಡಲಿದೆ. ಜುಲೈ 24ರಿಂದ ಹೊಸ ಪೋಕೊ F3 ಸ್ಮಾರ್ಟ್‌ಫೋನ್ ಪ್ರಿ ಬುಕಿಂಗ್ ಆರಂಭವಾಗಲಿದ್ದು, ಜುಲೈ 26 ರಿಂದ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದು. ಗನ್‌ಮೆಟಲ್ ಸಿಲ್ವರ್ ಮತ್ತು ಪ್ರಿಡೇಟರ್ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಹೊಸ ಪೋಕೊ F3 ದೊರೆಯಲಿದೆ. 110 4G: ಹೊಸ ಫೀಚರ್ ಫೋನ್ ಪರಿಚಯಿಸಿದ ನೋಕಿಯಾ ಪೋಕೊ F3 , 6.67 ಇಂಚಿನ ಡಿಸ್‌ಪ್ಲೇ, 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ ಜತೆಗೆ 8+2 ಮೆಗಾಪಿಕ್ಸೆಲ್ ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಹೊಂದಿದೆ. ಅಲ್ಲದೆ, 5065mAh ಬ್ಯಾಟರಿ ಬೆಂಬಲ ಕೂಡ ಇದೆ. ಗ್ಯಾಜೆಟ್ ಮಾರುಕಟ್ಟೆಗೆ ಬಂತು ಪೋಕೊ ಹೊಸ ಸ್ಮಾರ್ಟ್‌ಫೋನ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.