ನಥಿಂಗ್ ಇಯರ್ 1 ಆಕರ್ಷಕ ಇಯರ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಬೆಂಗಳೂರು: ದೇಶದ ಆಡಿಯೊ ಮಾರುಕಟ್ಟೆಗೆ ನೂತನ ಮಾದರಿಯ ‘ನಥಿಂಗ್ ಇಯರ್ 1’ ಇಯರ್‌ಬಡ್ಸ್ ಬಿಡುಗಡೆಯಾಗಿದೆ. ಬಳಕೆದಾರರಿಗೆ ಸುಲಲಿತ ಮತ್ತು ಪ್ರೀಮಿಯಂ ಅನುಭವವನ್ನು ನಥಿಂಗ್ ಇಯರ್ 1 ನೀಡಲಿದೆ. ಪಾರದರ್ಶಕ ವಿನ್ಯಾಸ, 34 ಗಂಟೆಗಳ ಬ್ಯಾಟರಿ ಬಾಳಿಕೆಯ ಕೇಸ್, 11.6 ಎಂಎಂ ಡ್ರೈವರ್ ಮತ್ತು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ವೈಶಿಷ್ಟ್ಯ ಹೊಂದಿದೆ. ದೇಶದಲ್ಲಿ ನಥಿಂಗ್ ಇಯರ್ 1 ಬೆಲೆ ₹5,999 ಇದೆ. ಹೊಸ ಇಯರ್‌ಫೋನ್ ಕುರಿತು ಮಾತನಾಡಿರುವ ನಥಿಂಗ್‌ನ ಸಿಇಒ ಹಾಗೂ ಸಹಸಂಸ್ಥಾಪಕ ಕಾರ್ಲ್ ಪೈ, ನಥಿಂಗ್ ಇಯರ್ 1 ಸುಧಾರಿತ ತಂತ್ರಜ್ಞಾನ, ಹೊಸ ವಿನ್ಯಾಸ ಮತ್ತು ನಿರ್ದಿಷ್ಠ ಎಂಜಿನಿಯರಿಂಗ್ ಹೊಂದಿದ್ದು, ಗ್ರಾಹಕರಿಗೆ ವಿಶೇಷ ಅನುಭವ ನೀಡಲಿದೆ ಎಂದಿದ್ದಾರೆ. ಇಯರ್‌ 1, ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ವ್ಯವಸ್ಥೆ ಹೊಂದಿದ್ದು, ಮೂರು ಹೈ ಡೆಫಿನೇಷನ್‌ ಮೈಕ್‌ಗಳನ್ನು ಒಳಗೊಂಡಿದೆ. ಇದು ನಿಮಗೆ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಸ್ಪಷ್ಟವಾಗಿ ತಲುಪಿಸುತ್ತದೆ. ಇಯರ್‌ 1 ಇಯರ್‌ಫೋನ್ಸ್, 5.7 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಬರುತ್ತದೆ. ಜತೆಗೆ, ಕೇಸ್ ಅನ್ನು 10 ನಿಮಿಷ ಮಾಡಿದರೆ 8 ಗಂಟೆಗಳ ಬ್ಯಾಟರಿ ನೀಡುತ್ತದೆ. (1) - . . --- . #://./pLWW073xhx ../JiSc3ATBOR 110 4G: ಹೊಸ ಫೀಚರ್ ಫೋನ್ ಪರಿಚಯಿಸಿದ ನೋಕಿಯಾ ನಥಿಂಗ್‌ ಇಯರ್ 1, 2021ರ ಆಗಸ್ಟ್‌ 17ರ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್‌ ಮೂಲಕ‌ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.