ಆಕರ್ಷಕ ವಿನ್ಯಾಸದ ಫಿಟ್ನೆಸ್ ಟ್ರ್ಯಾಕರ್ ಪರಿಚಯಿಸಿದ ಫಿಟ್‌ಬಿಟ್ ಬೆಂಗಳೂರು: ಯುವಜನತೆಯಲ್ಲಿ ಫಿಟ್ನೆಸ್ ಕುರಿತ ಕಾಳಜಿ ಹೆಚ್ಚುತ್ತಿರುವ ಬೆನ್ನಲ್ಲೇ ಹೊಸ ಹೊಸ ಮಾದರಿಯ ಗ್ಯಾಜೆಟ್‌ಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿವೆ. ಫಿಟ್ನೆಸ್ ಮತ್ತು ಸ್ಮಾರ್ಟ್‌ಗ್ಯಾಜೆಟ್ ತಯಾರಿಕ ಸಂಸ್ಥೆ ಫಿಟ್‌ಬಿಟ್, ದೇಶದಲ್ಲಿ ನೂತನ ಮಾದರಿಯ ಫಿಟ್ನೆಸ್ ಟ್ರ್ಯಾಕರ್ ಪರಿಚಯಿಸಿದೆ. ಫಿಟ್‌ಬಿಟ್ ಲಕ್ಸ್ ಮತ್ತು ಫಿಟ್‌ಬಿಟ್ ಲಕ್ಸ್ ಸ್ಪೆಶಲ್ ಎಡಿಶನ್ ಎಂಬ ಎರಡು ಮಾದರಿಗಳು ದೇಶದಲ್ಲಿ ಬಿಡುಗಡೆಯಾಗಿದ್ದು, ಆಭರಣ ರೀತಿಯಲ್ಲಿ ಧರಿಸಬಹುದಾದ ವಿನ್ಯಾಸ ಹೊಂದಿವೆ. ಹೃದಯ ಬಡಿತ, ದೇಹದ ತಾಪಮಾನದಲ್ಲಿನ ವ್ಯತ್ಯಾಸ ಸಹಿತ ವಿವಿಧ ಆಕರ್ಷಕ ಫೀಚರ್‌ಗಳನ್ನು ಹೊಸ ಫಿಟ್‌ಬಿಟ್ ಲಕ್ಸ್ ಆವೃತ್ತಿ ಹೊಂದಿದೆ. ಮಾರುಕಟ್ಟೆಗೆ ಬಂತು ಹೊಸ ನೋಕಿಯಾ ಸ್ಮಾರ್ಟ್‌ಫೋನ್ ಬೆಲೆ ವಿವರ ಫಿಟ್‌ಬಿಟ್ ಲಕ್ಸ್, ದೇಶದಲ್ಲಿ ₹10,999 ದರ ಹೊಂದಿದ್ದು, ಮೂರು ಆವೃತ್ತಿಗಳಲ್ಲಿ ಲಭ್ಯವಿದೆ. ಫಿಟ್‌ಬಿಟ್ ಲಕ್ಸ್ ಸ್ಪೆಶಲ್ ಎಡಿಶನ್ ಬೆಲೆ ₹17,999 ಇದೆ. ಹೆಲಿಕ್ಸ್ ಸ್ಮಾರ್ಟ್‌ವಾಚ್ 2.0 ಬಿಡುಗಡೆ ಮಾಡಿದ ಟೈಮೆಕ್ಸ್: ಬೆಲೆ ವಿವರ ಇಲ್ಲಿದೆ.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.