ಗ್ಯಾಜೆಟ್ ಮಾರುಕಟ್ಟೆಗೆ ಬಂತು ಪೋಕೊ ಹೊಸ ಸ್ಮಾರ್ಟ್‌ಫೋನ್ ಬೆಂಗಳೂರು: ಶವೋಮಿ ಸಮೂಹ ಒಡೆತನ ಹೊಂದಿರುವ ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್ ಕಂಪನಿ ಪೋಕೊ, ದೇಶದಲ್ಲಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಪೋಕೊ ಬಜೆಟ್ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಪೋಕೊ ಎಂ3 4 ಆವೃತ್ತಿ ಬಿಡುಗಡೆಯಾಗಿದೆ. ಈ ಮೊದಲು ಪೋಕೊ, ಎಂ3 6 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು. ನೂತನ ಆವೃತ್ತಿ ಪೋಕೊ ಎಂ3 4 ಮಾದರಿಯಲ್ಲಿ 64 ಸ್ಟೋರೇಜ್ ಇದೆ. ಬೆಲೆ ವಿವರ: ಪೋಕೊ ಎಂ3 4 ಬೆಲೆ ದೇಶದಲ್ಲಿ ₹10,499 ದರ ಹೊಂದಿದೆ. ಪೋಕೊ ಹಳದಿ, ಪವರ್ ಬ್ಲ್ಯಾಕ್ ಮತ್ತು ಕೂಲ್ ಬ್ಲೂ ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಹೊಸ ಫೋನ್ ಫ್ಲಿಪ್‌ಕಾರ್ಟ್ ಮೂಲಕ ಲಭ್ಯವಾಗಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ‘ಎಂ’ ಸರಣಿ ಸ್ಮಾರ್ಟ್‌ಫೋನ್ ಬೆಲೆ ಏರಿಕೆ ಪೋಕೊ ಎಂ3 6 , 64 ಮಾದರಿಗೆ ₹10,999 ದರ ಮತ್ತು 128 ಆವೃತ್ತಿಗೆ ₹11,999 ದರ ಹೊಂದಿದೆ. ನೂತನ ಒಪ್ಪೊ 5G ಸ್ಮಾರ್ಟ್‌ಫೋನ್ ಬಿಡುಗಡೆ: ದೇಶದಲ್ಲಿ ಬೆಲೆ ಎಷ್ಟಿದೆ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.