ಸ್ಯಾಮ್‌ಸಂಗ್ ಗ್ಯಾಲಕ್ಸಿ A22 ಬಿಡುಗಡೆ: ಬೆಲೆ ಮತ್ತು ಲಭ್ಯತೆ ವಿವರ ಬೆಂಗಳೂರು: ದೇಶದ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್ ಪರಿಚಯಿಸಿದೆ ಸ್ಯಾಮ್‌ಸಂಗ್. ಗ್ಯಾಲಕ್ಸಿ ಎ ಸರಣಿಯಲ್ಲಿ ಹೊಸದಾಗಿ A22 ಬಿಡುಗಡೆಯಾಗಿದೆ. ಹೊಸ ಗ್ಯಾಲಕ್ಸಿ ಎ ಸರಣಿ ಸ್ಮಾರ್ಟ್‌ಫೋನ್‌ನಲ್ಲಿ 5000mAh ಬ್ಯಾಟರಿ, ಹಿಂಬದಿಯಲ್ಲಿ ನಾಲ್ಕು ಕ್ಯಾಮರಾ ವಿಶೇಷತೆಯಾಗಿದೆ. ಗ್ಯಾಲಕ್ಸಿ A22 ಸ್ಯಾಮ್‌ಸಂಗ್ ನೂತನ ಗ್ಯಾಲಕ್ಸಿ A22 ಸ್ಮಾರ್ಟ್‌ಫೋನ್, 6 ಮತ್ತು 128 ಸ್ಟೋರೇಜ್ ಆವೃತ್ತಿಯಲ್ಲಿ ದೊರೆಯಲಿದ್ದು, ₹18,499 ದರ ಹೊಂದಿದೆ. ಆರಂಭಿಕ ಕೊಡುಗೆಯಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರಿಗೆ ₹1,500 ಡಿಸ್ಕೌಂಟ್ ಕೂಡ ದೊರೆಯಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ‘ಎಂ’ ಸರಣಿ ಸ್ಮಾರ್ಟ್‌ಫೋನ್ ಬೆಲೆ ಏರಿಕೆ 6.4 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಹಿಂಭಾಗದಲ್ಲಿ 48 ಮೆಗಾಪಿಕ್ಸೆಲ್ ಜತೆಗೆ 8+2+2 ಮೆಗಾಪಿಕ್ಸೆಲ್ ಕ್ಯಾಮರಾ ಹಾಗೂ13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಇದೆ. ನಥಿಂಗ್ ಇಯರ್ 1 ಇಯರ್‌ಫೋನ್ ಬೆಲೆ ವಿವರ ಬಿಡುಗಡೆ: ಜುಲೈ 27ರಂದು ಮಾರುಕಟ್ಟೆಗೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.