ಶಿಯೋಮಿ ರೆಡ್ಮಿಬುಕ್ ಲ್ಯಾಪ್‌ಟಾಪ್ ದೇಶದಲ್ಲಿ ಬಿಡುಗಡೆ: ಬೆಲೆ ವಿವರ ಬೆಂಗಳೂರು: ವಿವಿಧ ಬಜೆಟ್‌ನ ಸ್ಮಾರ್ಟ್‌ಫೋನ್ ಮೂಲಕ ದೇಶದ ಮಾರುಕಟ್ಟೆಯಲ್ಲಿ ಹೆಸರು ಗಳಿಸಿರುವ ಶಿಯೋಮಿ, ರೆಡ್ಮಿಬುಕ್ ಸರಣಿಯಲ್ಲಿ ಹೊಸ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ. ಶಿಯೋಮಿ ರೆಡ್ಮಿಬುಕ್ ಪ್ರೊ ಮತ್ತು ರೆಡ್ಮಿಬುಕ್ ಇ ಲರ್ನಿಂಗ್ ಎಡಿಶನ್ ಲ್ಯಾಪ್‌ಟಾಪ್ ದೇಶದ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಇಂಟೆಲ್ ಪ್ರೊಸೆಸರ್ ಸಹಿತ ಲಭ್ಯವಿದೆ. ಎರಡೂ ಮಾದರಿಗಳಲ್ಲಿ 11th ಜನರೇಶನ್ ಇಂಟೆಲ್ ಕೋರ್ ಪ್ರೊಸೆಸರ್ ಇದ್ದು, 512GB ವರೆಗೆ ಹೊಂದಿದೆ. ಅಲ್ಲದೆ, ಪ್ರೊ ಆವೃತ್ತಿಯನ್ನು ವೃತ್ತಿಪರರನ್ನು ಗಮನದಲ್ಲಿರಿಸಿಕೊಂಡು ತಯಾರಿಸಿದ್ದರೆ, ಇ ಲರ್ನಿಂಗ್ ಆವೃತ್ತಿಯನ್ನು ವಿದ್ಯಾರ್ಥಿಗಳಿಗಾಗಿ ತಯಾರಿಸಿದೆ. ಶಿಯೋಮಿ ರೆಡ್ಮಿಬುಕ್ ಪ್ರೊ ದರ 8GB + 512GB ಆವೃತ್ತಿಗೆ ₹49,999 ದರವಿದೆ. ಮಾರುಕಟ್ಟೆಗೆ ಬಂತು ಹೊಸ ನೋಕಿಯಾ ಸ್ಮಾರ್ಟ್‌ಫೋನ್ ರೆಡ್ಮಿಬುಕ್ ಇ ಲರ್ನಿಂಗ್ 8GB + 512GB ಆವೃತ್ತಿಗೆ ₹41,999 ದರ ನಿಗದಿಪಡಿಸಲಾಗಿದೆ. ಆಕರ್ಷಕ ವಿನ್ಯಾಸದ ಫಿಟ್ನೆಸ್ ಟ್ರ್ಯಾಕರ್ ಪರಿಚಯಿಸಿದ ಫಿಟ್‌ಬಿಟ್ ಹೊಸ ಲ್ಯಾಪ್‌ಟಾಪ್ ಆಗಸ್ಟ್ 6ರಿಂದ ಫ್ಲಿಪ್‌ಕಾರ್ಟ್, ಎಂ ಡಾಟ್ ಕಾಂ ಮೂಲಕ ಲಭ್ಯವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.