ಎಂಐಗೆ ಬೈ ಹೇಳಿದ ಶಿಯೋಮಿ: ಹೊಸ ಲೋಗೋ ಬ್ರ್ಯಾಂಡಿಂಗ್ ಘೋಷಣೆ ಬೆಂಗಳೂರು: ಸ್ಮಾರ್ಟ್‌ಫೋನ್ ಕಂಪನಿ ಶಿಯೋಮಿ, ‘ಎಂಐ’ ಹೆಸರನ್ನು ಬ್ರ್ಯಾಂಡಿಂಗ್‌ನಿಂದ ತೆಗೆದು, ಹೊಸ ಶಿಯೋಮಿ ಲೋಗೊ ಬಳಸಲು ಮುಂದಾಗಿದೆ. ‘ಎಂಐ’ ಹೆಸರಿನಲ್ಲಿ ಸ್ಮಾರ್ಟ್‌ಫೋನ್ ಮತ್ತು ಟಿವಿಗಳನ್ನು ಶಿಯೋಮಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಎಂಐ ಎನ್ನುವುದು ಪ್ರೀಮಿಯಂ ಬ್ರ್ಯಾಂಡಿಂಗ್ ಆಗಿದೆ. ಆದರೆ ಅದನ್ನು ತೆಗೆದುಹಾಕಿ, ಅದರ ಬದಲಿಗೆ ಶಿಯೋಮಿ ಹೆಸರಿನಲ್ಲಿಯೇ, ಹೊಸ ಲೋಗೊ ಮೂಲಕ ಟಿವಿ ಮತ್ತು ಸ್ಮಾರ್ಟ್‌ಫೋನ್ ಪರಿಚಯಿಸಲು ಕಂಪನಿ ಮುಂದಾಗಿದೆ. ಶಿಯೋಮಿ, ರೆಡ್ಮಿ ಮತ್ತು ಎಂಐ ಹೆಸರಿನಲ್ಲಿ ವಿವಿಧ ಗ್ಯಾಜೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮುಂದೆ, ರೆಡ್ಮಿ ಮತ್ತು ಶಿಯೋಮಿ ಹೆಸರಿನಲ್ಲಿಯೇ ಹೊಸ ಗ್ಯಾಜೆಟ್‌ಗಳು ಮಾರುಕಟ್ಟೆ ಪ್ರವೇಶಿಸಲಿದೆ. ದೇಶದಲ್ಲಿ ಶಿಯೋಮಿ ರೆಡ್ಮಿ ಸ್ಮಾರ್ಟ್‌ಫೋನ್ ಬೆಲೆ ಏರಿಕೆ ಎಂಐ ಹೆಸರಿನಲ್ಲಿ ಲಭ್ಯವಾಗುತ್ತಿದ್ದ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಸ್ಮಾರ್ಟ್ ಟಿವಿ ಮುಂದೆ ಶಿಯೋಮಿ ಹೆಸರಿನ ಹೊಸ ಲೋಗೊ ಸಹಿತ ಲಭ್ಯವಾಗಲಿದೆ. ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ಬೆಲೆ ದೇಶದಲ್ಲಿ ₹1,500ವರೆಗೆ ಏರಿಕೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.