13: ಆ್ಯಪಲ್ ಹೊಸ ಐಫೋನ್ ಬೆಲೆ ₹69,900 ರಿಂದ ಆರಂಭ! ಬೆಂಗಳೂರು: ಟೆಕ್ ಲೋಕದ ಜನಪ್ರಿಯ ಕಂಪನಿ ಆ್ಯಪಲ್, ಹೊಸ ಐಫೋನ್13 ಸರಣಿಯನ್ನು ಪರಿಚಯಿಸಿದೆ. ಐಫೋನ್13 ಸರಣಿಯಲ್ಲಿ ನಾಲ್ಕು ನೂತನ ಮಾದರಿಗಳು ದೊರೆಯಲಿದೆ. ಕಳೆದ ವರ್ಷ ಪರಿಚಯಿಸಿದ್ದ ಐಫೋನ್ 12ಗೆ ಹೋಲಿಸಿದರೆ, ಬ್ಯಾಟರಿ, ಡಿಸ್‌ಪ್ಲೇ ಮತ್ತು ಕ್ಯಾಮರಾ, ಆ್ಯಪಲ್ ಚಿಪ್ ಹಾಗೂ ತಾಂತ್ರಿಕ ವೈಶಿಷ್ಟ್ಯಗಳಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿದೆ ಎಂದು ಆ್ಯಪಲ್ ಹೇಳಿದೆ. ಯಾವೆಲ್ಲ ಮಾದರಿ ಬಿಡುಗಡೆ? ಆ್ಯಪಲ್ ಐಫೋನ್ 13 ಸರಣಿಯಲ್ಲಿ ಹೊಸದಾಗಿ, ಐಫೋನ್ 13 ಮಿನಿ, ಐಫೋನ್ 13, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಬಿಡುಗಡೆಯಾಗಿದೆ. ಈ ಬಾರಿ ಆರಂಭಿಕ ಆವೃತ್ತಿಯಲ್ಲಿ 128 ಸ್ಟೋರೇಜ್ ಪರಿಚಯಿಸಿರುವ ಆ್ಯಪಲ್, ಟಾಪ್ ಆವೃತ್ತಿಯಲ್ಲಿ 1TB ಮೆಮೊರಿ ಅಳವಡಿಸಿದೆ. ಯಾವಾಗ ಲಭ್ಯ? ಹೊಸ ಸರಣಿಯ ಆ್ಯಪಲ್ ಐಫೋನ್ ಸೆ. 17ರಿಂದ ಪ್ರಿ ಬುಕಿಂಗ್ ಲಭ್ಯವಿದ್ದು, ಸೆ. 24ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ. ಆ್ಯಪಲ್ ಇಂಡಿಯಾ ಆನ್‌ಲೈನ್ ಸ್ಟೋರ್, ಪ್ರಮುಖ ರಿಟೇಲ್ ಮತ್ತು ಆನ್‌ಲೈನ್ ಶಾಪಿಂಗ್ ತಾಣಗಳ ಮೂಲಕ ನೂತನ ಐಫೋನ್ ಲಭ್ಯವಾಗಲಿದೆ. ಬೆಲೆ ವಿವರ (ಸ್ಟೋರೇಜ್ ಆವೃತ್ತಿಗೆ ಅನುಗುಣವಾಗಿ) ಆ್ಯಪಲ್ ಐಫೋನ್ 13 ಮಿನಿ ₹69,900 - 128 ₹79,900 - 256 ₹99,900 - 512 ಆ್ಯಪಲ್ ಐಫೋನ್ 13 ₹79,900 - 128 ₹89,900 - 256 ₹109,900 - 512 ಆ್ಯಪಲ್ ಐಫೋನ್ 13 ಪ್ರೊ ₹1,19,900 - 128 ₹1,29,900 - 256 ₹1,49,900 - 512 ₹1,69,900 - 1 ರಿಲಯನ್ಸ್ ಪರಿಚಯಿಸಲಿದೆ ಜಿಯೊಬುಕ್ ಲ್ಯಾಪ್‌ಟಾಪ್: ಶೀಘ್ರದಲ್ಲಿ ಬಿಡುಗಡೆ ಆ್ಯಪಲ್ ಐಫೋನ್ 13 ಪ್ರೊ ಮ್ಯಾಕ್ಸ್ ₹1,29,900 - 128 ₹1,39,900 - 256 ₹1,58,900 - 512 ₹1,79,900 - 1 2021: ಹೊಸ ಆ್ಯಪಲ್ ಐಫೋನ್, ಐಪ್ಯಾಡ್ ಮತ್ತು ವಾಚ್ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.