ಮ್ಯಾಕ್‌ಬುಕ್, ಐಫೋನ್ ಸ್ವಚ್ಛಗೊಳಿಸಲು ಆ್ಯಪಲ್ ಪಾಲಿಶಿಂಗ್ ಬಟ್ಟೆ: ಬೆಲೆ ₹1,900! ಬೆಂಗಳೂರು: ಆ್ಯಪಲ್ ಕಂಪನಿಯ ಮ್ಯಾಕ್‌ಬುಕ್, ಐಫೋನ್ ಮತ್ತು ಇತರ ಉಪಕರಣಗಳನ್ನು ಸ್ವಚ್ಛಗೊಳಿಸಲು ವಿನೂತನ ‘ಪಾಲಿಶಿಂಗ್ ಕ್ಲೋತ್’ ಬಿಡುಗಡೆಯಾಗಿದೆ. ಆ್ಯಪಲ್ ಪರಿಚಯಿಸಿರುವ ಪಾಲಿಶಿಂಗ್ ಬಟ್ಟೆಗೆ ದೇಶದಲ್ಲಿ ₹1,900 ದರ ನಿಗದಿಪಡಿಸಲಾಗಿದೆ. ಮೆದುವಾದ, ಗುಣಮಟ್ಟದ ಬಟ್ಟೆ ಬಳಸಿ ಈ ಪಾಲಿಶಿಂಗ್ ಕ್ಲೋತ್ ತಯಾರಿಸಲಾಗಿದೆ ಎಂದು ಆ್ಯಪಲ್ ಕಂಪನಿ ಹೇಳಿಕೊಂಡಿದೆ. ಆ್ಯಪಲ್ ಮ್ಯಾಕ್‌ಬುಕ್, ಐಪ್ಯಾಡ್ ಮತ್ತು ಐಫೋನ್ ಹಾಗೂ ಇತರ ಸಾಧನಗಳನ್ನು ಪಾಲಿಶಿಂಗ್ ಕ್ಲೋತ್ ಬಳಸಿ ಸ್ವಚ್ಛ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಆ್ಯಪಲ್‌: ಹೊಸ ಚಿಪ್, ಮ್ಯಾಕ್‌ಬುಕ್‌ ಪ್ರೊ, ಏರ್‌ಪಾಡ್ಸ್‌ ಬಿಡುಗಡೆ ಹೊಸ ಮ್ಯಾಕ್‌ಬುಕ್ ಪ್ರೊ ಬಿಡುಗಡೆಯ ಜತೆಗೆ ನೂತನ ಪಾಲಿಶಿಂಗ್ ಕ್ಲೋತ್ ಕೂಡ ಬಿಡುಗಡೆಯಾಗಿದೆ. ಅಲ್ಲದೆ, ಖರೀದಿಗೆ ತಿಂಗಳಿಗೆ ₹224 ದರದ ಇಎಂಐ ಪ್ಲ್ಯಾನ್ ಕೂಡ ಲಭ್ಯವಿದೆ. : ಹೊಸ ಸರಣಿಯ ವಾಚ್ ಬೆಲೆ, ಬಿಡುಗಡೆ ದಿನಾಂಕ ಪ್ರಕಟ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.