XR20: ಬಲಿಷ್ಠ ವಿನ್ಯಾಸ ಮತ್ತು ಮಿಲಿಟರಿ ದರ್ಜೆಯ ಸ್ಮಾರ್ಟ್‌ಫೋನ್ ಬಿಡುಗಡೆ ಬೆಂಗಳೂರು: ನೋಕಿಯಾ ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಆಕರ್ಷಕ ಮಾದರಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಮಿಲಿಟರಿ ದರ್ಜೆಯ ವಿನ್ಯಾಸ ಮತ್ತು ಬಲಿಷ್ಠ ನಿರ್ಮಾಣದ ಗುಣಮಟ್ಟ ಹೊಂದಿರುವ ಭರವಸೆಯೊಂದಿಗೆ ನೂತನ ನೋಕಿಯಾ XR20 ಸ್ಮಾರ್ಟ್‌ಫೋನ್ ಪರಿಚಯಿಸಿದೆ. ನೋಕಿಯಾ XR20 ನೋಕಿಯಾ ನೂತನ XR20 ಸ್ಮಾರ್ಟ್‌ಫೋನ್, ಮುಂದಿನ ನಾಲ್ಕು ವರ್ಷಗಳ ಅವಧಿಗೆ ಮಾಸಿಕ ಭದ್ರತಾ ಅಪ್‌ಡೇಟ್ ಮತ್ತು ಮೂರು ವರ್ಷ ಸಾಫ್ಟ್‌ವೇರ್ ಅಪ್‌ಗ್ರೇಡ್ ಹೊಂದಿದೆ. 48 ಮೆಗಾಪಿಕ್ಸೆಲ್ ಝೆಸ್ ಅಪ್ಟಿಕ್ಸ್ ಡ್ಯುಯಲ್ ಲೆನ್ಸ್, 18W ಫಾಸ್ಟ್ ಚಾರ್ಜಿಂಗ್ ಜತೆಗೆ ಎರಡು ದಿನಗಳವರೆಗೆ ಬಾಳಿಕೆ ಬರುವ ಬ್ಯಾಟರಿ ಇದರಲ್ಲಿದೆ ಎಂದು ನೋಕಿಯಾ ಹೇಳಿದೆ. ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ ಬೆಲೆ ಮತ್ತು ಲಭ್ಯತೆ ಹೊಸ ನೋಕಿಯಾ XR20, ಅಲ್ಟ್ರಾ ಬ್ಲೂ ಮತ್ತು ಗ್ರಾನೈಟ್ ಎಂಬ ಎರಡು ಬಣ್ಣಗಳಲ್ಲಿ ದೊರೆಯಲಿದೆ. ಅಲ್ಲದೆ, 6 ಮತ್ತು 128 ಆರಂಭಿಕ ಮಾದರಿ ಇದ್ದು, ₹46,999 ದರ ಹೊಂದಿದೆ. ಅಕ್ಟೋಬರ್‌ 20ರಿಂದ ಪ್ರಿ ಬುಕಿಂಗ್ ಆರಂಭವಾಗಲಿದ್ದು, 30 ಅಕ್ಟೋಬರ್‌ಗೆ ಮಾರುಕಟ್ಟೆಯಲ್ಲಿ ದೊರೆಯಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A21s ಸ್ಮಾರ್ಟ್‌ಫೋನ್ ಬೆಲೆ ₹2,500 ಇಳಿಕೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.