: ಸ್ಮಾರ್ಟ್‌ಫೋನ್, ಟಿವಿ ಖರೀದಿಗೆ ದೀಪಾವಳಿ ವಿಶೇಷ ಕೊಡುಗೆ ಬೆಂಗಳೂರು: ದೇಶದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್‌ಫೋನ್, ಗ್ಯಾಜೆಟ್ ಕಂಪನಿಗಳು ವಿಶೇಷ ಮಾರಾಟ ಆಯೋಜಿಸುತ್ತಿವೆ. ಒನ್‌ಪ್ಲಸ್ ದಿವಾಲಿ ಸೇಲ್ ಆರಂಭವಾಗಿದ್ದು, ಆಕರ್ಷಕ ದರ ಕಡಿತ ಪ್ರಕಟಿಸಿದೆ. ವಿವಿಧ ಆವೃತ್ತಿ ಮತ್ತು ಮಾದರಿಗಳ ಟಿವಿ ಮತ್ತು ಸ್ಮಾರ್ಟ್‌ಫೋನ್ ಮೇಲೆ ಒನ್‌ಪ್ಲಸ್ ದೀಪಾವಳಿ ಕೊಡುಗೆ ಲಭ್ಯವಿದೆ. ಜತೆಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮೂಲಕವೂ ಒನ್‌ಪ್ಲಸ್ ಆಫರ್ ಸೇಲ್ ಪ್ರಯೋಜನ ಪಡೆಯಬಹುದು. ಒನ್‌ಪ್ಲಸ್ 9 ಸರಣಿಯ ಸ್ಮಾರ್ಟ್‌ಫೋನ್ ಮೇಲೆ ₹4,000 ವರೆಗೆ ಡಿಸ್ಕೌಂಟ್ ಲಭ್ಯವಿದೆ. ಒನ್‌ಪ್ಲಸ್ 9R ಮತ್ತು ಒನ್‌ಪ್ಲಸ್ 9 ಖರೀದಿಗೆ ₹3,000 ಡಿಸ್ಕೌಂಟ್ ಪ್ರಕಟಿಸಲಾಗಿದೆ. ಬೈಕ್ ಕಂಪನ ಹೆಚ್ಚಾದರೆ ಐಫೋನ್ ಕ್ಯಾಮರಾಗೆ ಹಾನಿ: ಆ್ಯಪಲ್ ಎಚ್ಚರಿಕೆ ಒನ್‌ಪ್ಲಸ್ 9 ಪ್ರೊ ಖರೀದಿಗೆ ₹4,000 ಡಿಸ್ಕೌಂಟ್ ಇದೆ. ಜತೆಗೆ ಅಮೆಜಾನ್ ಮೂಲಕ ಖರೀದಿಸಿದರೆ ಎಚ್‌ಡಿಎಫ್‌ಸಿ ಕಾರ್ಡ್ ಬಳಕೆಗೆ ₹7,000 ವರೆಗೆ ಡಿಸ್ಕೌಂಟ್ ಮತ್ತು ಒನ್‌ಪ್ಲಸ್.ಇನ್ ಮೂಲಕ ಖರೀದಿಗೆ ಎಸ್‌ಬಿಐ ಕಾರ್ಡ್ ಬಳಸಿದರೆ ನೋ ಕಾಸ್ಟ್ ಇಎಂಐ ಕೊಡುಗೆ ಪ್ರಯೋಜನ ಪಡೆಯಬಹುದು. ಶಿಯೋಮಿ ದೀಪಾವಳಿ ಆಫರ್ ಸೇಲ್: ಸ್ಮಾರ್ಟ್‌ಫೋನ್ ಖರೀದಿಗೆ ವಿಶೇಷ ಕೊಡುಗೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.