: ಹೊಸ ಸರಣಿಯ ವಾಚ್ ಬೆಲೆ, ಬಿಡುಗಡೆ ದಿನಾಂಕ ಪ್ರಕಟ ಬೆಂಗಳೂರು: ಆ್ಯಪಲ್ ಹೊಸದಾಗಿ ಪರಿಚಯಿಸಿದ್ದ ಸ್ಮಾರ್ಟ್‌ವಾಚ್ ಸಿರೀಸ್ 7 ದೇಶದ ಮಾರುಕಟ್ಟೆಯಲ್ಲಿ ಬಿಡುಗಡೆ ಮತ್ತು ಬೆಲೆ ವಿವರವನ್ನು ಕಂಪನಿ ಬಹಿರಂಗಪಡಿಸಿದೆ. ಅಕ್ಟೋಬರ್ 8ರ ಮಧ್ಯಾಹ್ನ 1ರಿಂದ ಪ್ರಿ ಬುಕಿಂಗ್ ಲಭ್ಯವಾಗುತ್ತಿದೆ. ಆ್ಯಪಲ್ ವಾಚ್ ಸಿರೀಸ್ 7, ಮಾರುಕಟ್ಟೆಯಲ್ಲಿ ಅ. 15ರಿಂದ ದೊರೆಯುವ ಬಗ್ಗೆ ಕಂಪನಿ ಹೇಳಿಕೆ ಬಿಡುಗಡೆ ಮಾಡಿದೆ. ಸೆಪ್ಟೆಂಬರ್‌ನಲ್ಲಿ ನಡೆದ ಆ್ಯಪಲ್ ಈವೆಂಟ್‌ನಲ್ಲಿ ಹೊಸ ಐಫೋನ್ 13 ಸರಣಿ ಮತ್ತು ವಾಚ್ ಸಿರೀಸ್ 7 ಅನ್ನು ಪರಿಚಯಿಸಲಾಗಿತ್ತು. ಆದರೆ ನೂತನ ವಾಚ್ ಮಾರುಕಟ್ಟೆಗೆ ಪ್ರವೇಶಿಸಿರಲಿಲ್ಲ. ಆ್ಯಪಲ್ ಸಾಧನಗಳಿಗೆ ಐಒಎಸ್ 15: ಇದರ ಉಪಯುಕ್ತ 6 ಹೊಸ ವೈಶಿಷ್ಟ್ಯಗಳು ಇಲ್ಲಿವೆ... ಬೆಲೆ ವಿವರ ಆ್ಯಪಲ್ ವಾಚ್ ಸಿರೀಸ್ 7 ಮಾದರಿ ಆರಂಭಿಕ ಆವೃತ್ತಿ ಬೆಲೆ ₹41,900 ಇದೆ. ಅಂತಿಮ ಆವೃತ್ತಿ ದರ ₹73,900 ದರವಿದೆ. ಐದು ನೂತನ ಬಣ್ಣಗಳಲ್ಲಿ ಆ್ಯಪಲ್ ಹೊಸ ವಾಚ್ ಸಿರೀಸ್ 7 ಅನ್ನು ಪರಿಚಯಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.