ದೇಶದ ಮಾರುಕಟ್ಟೆಗೆ ಐವಾ ಪ್ರೀಮಿಯಂ ಹೈ-ಫೈ ಸ್ಪೀಕರ್ಸ್ ಬಿಡುಗಡೆ ಬೆಂಗಳೂರು: ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್ ಉಪಕರಣಗಳ ಬ್ರ್ಯಾಂಡ್ ಐವಾ, ದೇಶದ ಮಾರುಕಟ್ಟೆಗೆ ನೂತನ ಮಾದರಿಯ ಹೈ-ಫೈ ಪ್ರೀಮಿಯಂ ಸ್ಪೀಕರ್ ಪರಿಚಯಿಸಿದೆ. ಎಂಐ-ಎಕ್ಸ್ ಮತ್ತು ಎಸ್‌ಬಿ-ಎಕ್ಸ್ ಎನ್ನುವ ಎರಡು ಸರಣಿಗಳಲ್ಲಿ ಆಕರ್ಷಕ ವಿನ್ಯಾಸದ ಸ್ಪೀಕರ್‌ಗಳು ಮಾರುಕಟ್ಟೆ ಪ್ರವೇಶಿಸಿದ್ದು, ಸಂಗೀತ ಪ್ರೇಮಿಗಳಿಗೆ ಮತ್ತು ದಿನನಿತ್ಯದ ಬಳಕೆಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಕಂಪನಿ ಹೇಳಿದೆ. ಮನೆಯಲ್ಲಿ ಮತ್ತು ಹೊರಾಂಗಣ ಬಳಕೆಗೆ ಐವಾ ಹೈ-ಫೈ ಸ್ಪೀಕರ್ಸ್ ಸೂಕ್ತವಾಗಿದ್ದು, ರಿಚಾರ್ಚ್ ಮಾಡಬಲ್ಲ ಬ್ಯಾಟರಿ ಹೊಂದಿವೆ, ಅಲ್ಲದೆ ಪ್ರವಾಸ ಹೋಗುವ ಸಂದರ್ಭದಲ್ಲಿ, ಸಣ್ಣ ಸಮಾರಂಭಗಳಲ್ಲಿ ಮತ್ತು ಟಿವಿ, ಸ್ಮಾರ್ಟ್‌ಫೋನ್ ಜತೆ ಬಳಸಲು ಕೂಡ ಉತ್ತಮ ಆಯ್ಕೆ ಎಂದು ಐವಾ ಹೇಳಿದೆ. ದರ ಮತ್ತು ಲಭ್ಯತೆ ಎಂಐ-ಎಕ್ಸ್‌450 ಪ್ರೊ ಎನಿಗ್ಮಾ ಬೆಲೆ ₹59,990 ಮತ್ತು ಎಂಐ-ಎಕ್ಸ್ 150 ರೆಟ್ರೊ ಪ್ಲಸ್ ಎಕ್ಸ್ ದರ ₹24,990 ಇದೆ. ಎಸ್‌ಬಿ-ಎಕ್ಸ್350ಎ ಮಾದರಿಗೆ ₹19,990 ಮತ್ತು ಎಸ್‌ಬಿ-ಎಕ್ಸ್‌350J ₹17,990 ಹಾಗೂ ಎಸ್‌ಬಿ-ಎಕ್ಸ್‌30 ದರ ₹2,799 ಇದೆ. : ಮಾರುಕಟ್ಟೆಗೆ ಲಗ್ಗೆಯಿಟ್ಟ ಥಾಮ್ಸನ್‌ ಶ್ರೇಣಿಯ ಟಿ.ವಿ ಅಮೆಜಾನ್ ಆನ್‌ಲೈನ್, ರಿಲಯನ್ಸ್ ಡಿಜಿಟಲ್ ಮತ್ತು ಪ್ರಮುಖ ರಿಟೇಲ್ ಮಳಿಗೆಗಳಲ್ಲಿ ಐವಾ ಸ್ಪೀಕರ್ ದೊರೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.