ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ ಪರಿಚಯಿಸಿದ ನೋಕಿಯಾ ಬೆಂಗಳೂರು: ಬೇಸಿಕ್ ಫೀಚರ್ ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಹೆಸರು ಗಳಿಸಿದ್ದ ನೋಕಿಯಾ, ಆಕರ್ಷಕ ವಿನ್ಯಾಸದ ಟ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡಿದೆ. ನೋಕಿಯಾ T20 ಟ್ಯಾಬ್ಲೆಟ್ ಅನ್ನು ಎಚ್‌ಎಂಡಿ ಗ್ಲೋಬಲ್ ಪರಿಚಯಿಸಿದ್ದು, 2K ಡಿಸ್‌ಪ್ಲೇ ಮತ್ತು 8 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ ಹೊಂದಿದೆ. ನೋಕಿಯಾ T20 ಹೊಸ ನೋಕಿಯಾ T20 ಟ್ಯಾಬ್ಲೆಟ್‌ನಲ್ಲಿ 4GB , ಗೂಗಲ್ ಕಿಡ್ಸ್ ಸ್ಪೇಸ್ ಮತ್ತು ದಿನಪೂರ್ತಿ ಬಾಳಿಕೆ ಬರುವ ಬ್ಯಾಟರಿ ಇದೆ ಎಂದು ಕಂಪನಿ ಹೇಳಿದೆ. ಪ್ರಸ್ತುತ ಯುರೋಪ್ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿದ್ದು, ಆರಂಭಿಕ ಬೆಲೆ ಯುರೋಪ್ ದರಕ್ಕೆ ಹೋಲಿಸಿದರೆ ವೈ-ಫೈ ಮಾದರಿಗೆ ₹17,200 ಮತ್ತು ವೈ-ಫೈ + 4G ಮಾದರಿಗೆ ₹20,600 ದರವಿದೆ. ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದ ಹುಂಡೈ: ಬೆಲೆ ವಿವರ ಇಲ್ಲಿದೆ.. ಆ್ಯಂಡ್ರಾಯ್ಡ್ 11 ಓಎಸ್, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 8,200mAh ಬ್ಯಾಟರಿ ಹೊಸ ನೋಕಿಯಾ T20 ಟ್ಯಾಬ್ಲೆಟ್‌ನಲ್ಲಿದೆ. : ದೇಶದ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.