ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದ ಹುಂಡೈ: ಬೆಲೆ ವಿವರ ಇಲ್ಲಿದೆ.. ಬೆಂಗಳೂರು: ಹುಂಡೈ ಎಲೆಕ್ಟ್ರಾನಿಕ್ಸ್ ದೇಶದ ಟಿವಿ ಮಾರುಕಟ್ಟೆಗೆ ಹೊಸ ಮಾದರಿಯ ಸ್ಮಾರ್ಟ್ ಎಲ್‌ಇಡಿ ಟಿವಿ ಬಿಡುಗಡೆ ಮಾಡಿದೆ. 43, 50 ಮತ್ತು 55 ಇಂಚಿನ ಡಿಸ್‌ಪ್ಲೇ ಹೊಂದಿರುವ ಮೂರು ಸ್ಮಾರ್ಟ್ ಟಿವಿ ಮಾದರಿಗಳನ್ನು ದೇಶದಲ್ಲಿ ಪರಿಚಯಿಸಿರುವ ಹುಂಡೈ ಹೆಚ್ಚಿನ ವೇಗದ ಕಾರ್ಯಾಚರಣೆ ಹೊಂದಿದೆ ಎಂದು ಕಂಪನಿ ಹೇಳಿದೆ. ತಾಂತ್ರಿಕ ವೈಶಿಷ್ಟ್ಯ ಹುಂಡೈ ಎಲೆಕ್ಟ್ರಾನಿಕ್ಸ್ ಪರಿಚಯಿಸಿರುವ ಮೂರು ಟಿವಿಗಳು ಕೂಡ 1.5 , 8 ಮೆಮೊರಿ ಸ್ಟೋರೇಜ್ ಹೊಂದಿವೆ. ಜತೆಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಯೂಟ್ಯೂಬ್ ಸಹಿತ ಪ್ರಮುಖ ಒಟಿಟಿ ತಾಣಗಳನ್ನು ಕೂಡ ಹುಂಡೈ ಟಿವಿ ಹೊಂದಿದೆ. ಬೆಲೆ ವಿವರ ಹುಂಡೈ ಟಿವಿ 43 ಇಂಚಿನ ಮಾದರಿಗೆ ₹34,490 ಮತ್ತು 50 ಇಂಚಿನ ಆವೃತ್ತಿಗೆ ₹45,990 ಹಾಗೂ 55 ಇಂಚಿನ ಮಾದರಿಗೆ ₹52,990 ದರ ಹೊಂದಿದೆ. : ಎರಡು ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡಿದ ಶಿಯೋಮಿ ಹಬ್ಬದ ಸೀಸನ್‌ನಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ, ಹೊಸ ಮಾದರಿಯ ಟಿವಿಗಳನ್ನು ಕಂಪನಿಗಳು ದೇಶದಲ್ಲಿ ಬಿಡುಗಡೆ ಮಾಡುತ್ತಿವೆ. ಸ್ಮಾರ್ಟ್ ಟಿವಿ ಖರೀದಿಸುವಾಗ ಗೊಂದಲವೇ?: ಏನಿದು , , ಪರದೆ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.