: ದೇಶದ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆ ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯ ಬ್ರ್ಯಾಂಡ್ ಒಪ್ಪೊ, ಎರಡು ಮಾದರಿಗಳ ಬೆಲೆಯನ್ನು ಇಳಿಕೆ ಮಾಡಿದೆ. ಒಪ್ಪೊ A54 ಮತ್ತು ಒಪ್ಪೊ F19 ಬೆಲೆಯಲ್ಲಿ ಸುಮಾರು ₹1,000 ದಷ್ಟು ಏರಿಕೆಯಾಗಿದೆ. ಈಗಾಗಲೇ ಶಿಯೋಮಿ ಮತ್ತು ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ದರದಲ್ಲಿ ಏರಿಕೆಯಾಗಿರುವ ಬೆನ್ನಲ್ಲೇ, ಒಪ್ಪೊ ಕೂಡ ಬೆಲೆ ಏರಿಕೆ ಮಾಡಿದೆ. ಒಪ್ಪೊ ಪರಿಷ್ಕೃತ ದರ ಒಪ್ಪೊ A54 ಸ್ಮಾರ್ಟ್‌ಫೋನ್, 4 + 64 ಮಾದರಿಗೆ ₹13,990 ಬದಲಿಗೆ, ಬೆಲೆ ಪರಿಷ್ಕರಣೆ ಬಳಿಕ ₹14,990 ದರಕ್ಕೆ ದೊರೆಯುತ್ತಿದೆ. ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ಬೆಲೆ ದೇಶದಲ್ಲಿ ₹1,500ವರೆಗೆ ಏರಿಕೆ ಒಪ್ಪೊ ‌F19 ಸ್ಮಾರ್ಟ್‌ಫೋನ್ ₹18,990 ಬದಲಿಗೆ, ದರ ಹೆಚ್ಚಳ ಬಳಿಕ ₹19,990ಕ್ಕೆ ಲಭ್ಯವಾಗುತ್ತಿದೆ. ದೇಶದಲ್ಲಿ ಶಿಯೋಮಿ ರೆಡ್ಮಿ ಸ್ಮಾರ್ಟ್‌ಫೋನ್ ಬೆಲೆ ಏರಿಕೆ ಬಿಡಿಭಾಗಗಳ ಲಭ್ಯತೆ ಮತ್ತು ಪೂರೈಕೆಗೆ ಅನುಗುಣವಾಗಿ ದರ ಹೆಚ್ಚಳ ಮಾಡಲಾಗುತ್ತಿದೆ ಎಂದು ಸ್ಮಾರ್ಟ್‌ಫೋನ್ ಕಂಪನಿಗಳು ಕಾರಣ ನೀಡಿದ್ದವು. 12: ಹೊಸ ಐಫೋನ್ ಬಿಡುಗಡೆ ಬೆನ್ನಲ್ಲೇ ಹಳೆಯ ಆ್ಯಪಲ್ ಫೋನ್ ದರ ಇಳಿಕೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.