: ಎರಡು ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡಿದ ಶಿಯೋಮಿ ಬೆಂಗಳೂರು: ಹಬ್ಬಗಳ ಸೀಸನ್ ಬರುತ್ತಿದ್ದಂತೆ ಹೊಸ ಗ್ಯಾಜೆಟ್ ಮತ್ತು ಗೃಹಬಳಕೆಯ ಉತ್ಪನ್ನಗಳ ಬಿಡುಗಡೆ ಹೆಚ್ಚಾಗುತ್ತಿದೆ. ಶಿಯೋಮಿ, ರೆಡ್ಮಿ ಸ್ಮಾರ್ಟ್ ಟಿವಿ ಸರಣಿಯಲ್ಲಿ ಎರಡು ನೂತನ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ರೆಡ್ಮಿ ಸ್ಮಾರ್ಟ್ ಟಿವಿ 32 ಮತ್ತು ಸ್ಮಾರ್ಟ್ ಟಿವಿ 43 ದೇಶದ ಮಾರುಕಟ್ಟೆಗೆ ಬುಧವಾರ ಲಗ್ಗೆ ಇರಿಸಿದೆ. ಬೆಲೆ ಮತ್ತು ಲಭ್ಯತೆ ನೂತನ ರೆಡ್ಮಿ ಸ್ಮಾರ್ಟ್ ಟಿವಿ 32 ಇಂಚಿನ ಮಾದರಿ ಬೆಲೆ ದೇಶದಲ್ಲಿ ₹15,999 ಇದ್ದು, ರೆಡ್ಮಿ ಸ್ಮಾರ್ಟ್ ಟಿವಿ 43 ಇಂಚಿನ ಆವೃತ್ತಿ ಬೆಲೆ ₹25,999 ಇದೆ. ಅಮೆಜಾನ್ ಮತ್ತು ಎಂಐ ಸ್ಟೋರ್, ರಿಟೇಲ್ ಮಳಿಗೆ ಮೂಲಕ ನೂತನ ಶಿಯೋಮಿ ರೆಡ್ಮಿ ಟಿವಿ ದೇಶದಲ್ಲಿ ದೊರೆಯಲಿದೆ. ಗೇಮಿಂಗ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ಶಿಯೋಮಿ ರೆಡ್ಮಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2021 ಮೂಲಕ ಹೊಸ ರೆಡ್ಮಿ ಟಿವಿ ಬಿಡುಗಡೆಯಾಗುತ್ತಿದೆ. 13 : ಆ್ಯಪಲ್ ಇವೆಂಟ್ 2021ರಲ್ಲಿ ಏನೆಲ್ಲ ಬಿಡುಗಡೆ? ಬೆಲೆ ಎಷ್ಟು?... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.