ದೇಶದ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಪರಿಚಯಿಸಿದ ಇನ್ಫಿನಿಕ್ಸ್ ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮತ್ತೆ ಎರಡು ನೂತನ ಗ್ಯಾಜೆಟ್ ಪರಿಚಯಿಸುವ ಮೂಲಕ ಇನ್ಫಿನಿಕ್ಸ್ ಸದ್ದು ಮಾಡಿದೆ. ಬಜೆಟ್ ದರಕ್ಕೆ ಉತ್ತಮ ಫೀಚರ್ ನೀಡುವ ಮೂಲಕ ಇನ್ಫಿನಿಕ್ಸ್ ಜನಪ್ರಿಯತೆ ಗಳಿಸಿದೆ. ಇನ್ಫಿನಿಕ್ಸ್ ಹಾಟ್ 11 ಮತ್ತು ಇನ್ಫಿನಿಕ್ಸ್ ಹಾಟ್ 11ಎಸ್ ಎಂಬ ಎರಡು ಮಾದರಿಗಳು ಭಾರತದಲ್ಲಿ ಬಿಡುಗಡೆಯಾಗಿದ್ದು, ಫ್ಲಿಪ್‌ಕಾರ್ಟ್ ಮೂಲಕ ದೊರೆಯಲಿದೆ. ಇನ್ಫಿನಿಕ್ಸ್ ಹಾಟ್ 11 ಮತ್ತು ಇನ್ಫಿನಿಕ್ಸ್ ಹಾಟ್ 11ಎಸ್ ಎರಡೂ ಸ್ಮಾರ್ಟ್‌ಫೋನ್‌ಗಳು 4 ಮತ್ತು 64 ಎಂಬ ಏಕೈಕ ಸ್ಟೋರೇಜ್ ಆವೃತ್ತಿ ಮೂಲಕ ಲಭ್ಯವಿದ್ದು, ಕ್ರಮವಾಗಿ ₹8,999 ಮತ್ತು ₹10,999 ದರ ಹೊಂದಿವೆ. ಇನ್ಫಿನಿಕ್ಸ್ ಹಾಟ್ 11, 6.6 ಇಂಚಿನ ಫುಲ್‌ ಎಚ್‌ಡಿ+ ಡಿಸ್‌ಪ್ಲೇ, 13+13 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ, 8 ಮೆಗಾಪಿಕ್ಸೆಲ್ ಸೆಲ್ಫಿ, 5200mAh ಬ್ಯಾಟರಿ ಹೊಂದಿದೆ. ರಿಯಲ್‌ಮಿ C25Y ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ.. ಇನ್ಫಿನಿಕ್ಸ್ ಹಾಟ್ 11ಎಸ್, 6.78 ಇಂಚಿನ ಡಿಸ್‌ಪ್ಲೇ, 50+2+2 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮರಾ, 8 ಮೆಗಾಪಿಕ್ಸೆಲ್ ಸೆಲ್ಫಿ ಹೊಂದಿದೆ. ಜತೆಗೆ 5000mAh ಬ್ಯಾಟರಿ ಬೆಂಬಲವಿದೆ. ಹೊಸ ಶಿಯೋಮಿ 11ಟಿ ಸರಣಿ, ಶಿಯೋಮಿ ಪ್ಯಾಡ್ 5 ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.