: ಮಾರುಕಟ್ಟೆಗೆ ಲಗ್ಗೆಯಿಟ್ಟ ಥಾಮ್ಸನ್‌ ಶ್ರೇಣಿಯ ಟಿ.ವಿ ನವದೆಹಲಿ: ಥಾಮ್ಸನ್ ಇಂಡಿಯಾ ಸಂಸ್ಥೆಯು ಶ್ರೇಣಿಯಲ್ಲಿ (9ಆರ್ ಪ್ರೊ) ಮೂರು ನೂತನ ಟಿ.ವಿ ಬಿಡುಗಡೆಗೊಳಿಸಿದೆ. ಇದು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ವಿಶೇಷ ರಿಯಾಯಿತಿಯೊಂದಿಗೆ ಲಭ್ಯವಾಗಲಿದೆ. ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಥಾಮ್ಸನ್ ಶ್ರೇಣಿಯ ಟಿ.ವಿಗಳು 43 ಇಂಚು, 50 ಇಂಚು ಹಾಗೂ 55 ಇಂಚುಗಳಲ್ಲಿ ಲಭ್ಯವಿರಲಿವೆ. ಎಲ್ಲ ಮೂರು ಮಾದರಿಗಳು ಅಲ್ಟ್ರಾ-ಹೈ ಡೆಫಿನಿಷನ್ ವಿಡಿಯೊ ಗುಣಮಟ್ಟ, HDR10+ ಇತ್ಯಾದಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರಲಿವೆ. ಬೆಲೆ ಮಾಹಿತಿ: 9ಆರ್ ಪ್ರೊ (43PATH4545BL): ₹23,999 9ಆರ್ ಪ್ರೊ (50PATH1010BL): ₹31,999 9ಆರ್ ಪ್ರೊ (55PATH5050BL): ₹34,999 ಇದೇ ಸಂದರ್ಭದಲ್ಲಿ ಅತಿ ನೂತನ 8.5 ಕೆ.ಜಿ. ಸಾಮರ್ಥ್ಯದ ಸಂಪೂರ್ಣ ಆಟೋಮ್ಯಾಟಿಕ್ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ ₹23,499 ಆಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.