ಶಿಯೋಮಿ ದೀಪಾವಳಿ ಆಫರ್ ಸೇಲ್: ಸ್ಮಾರ್ಟ್‌ಫೋನ್ ಖರೀದಿಗೆ ವಿಶೇಷ ಕೊಡುಗೆ ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಪ್ರಮುಖ ಬ್ರ್ಯಾಂಡ್ ಶಿಯೋಮಿ, ‘ದಿವಾಲಿ ವಿತ್ ಎಂಐ’ ಎಂಬ ವಿಶೇಷ ಮಾರಾಟ ಕೊಡುಗೆಯನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆರಂಭಿಸಿದೆ. ಶಿಯೋಮಿ ಕಂಪನಿಯ ರೆಡ್ಮಿ ಟಿವಿ ಮತ್ತು ಸ್ಮಾರ್ಟ್‌ಫೋನ್ ಖರೀದಿಗೆ ₹19,000 ವರೆಗೆ ಉಳಿತಾಯ ಕೊಡುಗೆಯನ್ನು ಕಂಪನಿ ನೀಡುತ್ತಿದೆ. ಅಕ್ಟೋಬರ್ 3, ಭಾನುವಾರದಿಂದ ಆರಂಭವಾಗಿರುವ ಶಿಯೋಮಿ ದೀಪಾವಳಿ ಆಫರ್ ಸೇಲ್, ಅ. 7 ತಾರೀಕಿನವರೆಗೆ ನಡೆಯಲಿದೆ. ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇ. 10 ವರೆಗೆ ಡಿಸ್ಕೌಂಟ್ ಕೂಡ ಲಭ್ಯವಾಗಲಿದೆ. : ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್‌ನಲ್ಲಿ ವಿಶೇಷ ರಿಯಾಯಿತಿ ಶಿಯೋಮಿ ಎಂಐ 11X 5G, ರೆಡ್ಮಿ 9A, ಎಂಐ ಸ್ಮಾರ್ಟ್ ಬ್ಯಾಂಡ್ 5, ರೆಡ್ಮಿ ಇಯರ್‌ಬಡ್ಸ್, ಎಂಐ ರೊಬಾಟ್ ವಾಕ್ಯೂಮ್ ಮಾಪ್ ಸಹಿತ ವಿವಿಧ ಗ್ಯಾಜೆಟ್ ಖರೀದಿಗೆ ಶಿಯೋಮಿ ವಿಶೇಷ ಡಿಸ್ಕೌಂಟ್ ಕೂಡ ನೀಡುತ್ತಿದೆ. 6 : ಹಬ್ಬದ ಸೀಸನ್‌ಗೆ ವಿಶೇಷ ಆವೃತ್ತಿ ಸ್ಮಾರ್ಟ್‌ಫೋನ್ ಪರಿಚಯಿಸಿದ ಒಪ್ಪೊ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.