M3: ಮೊದಲ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಫ್ಲಿಪ್‌ಕಾರ್ಟ್ ಬೆಂಗಳೂರು: ಫ್ಲಿಪ್‌ಕಾರ್ಟ್ ಒಡೆತನದ ಬ್ರ್ಯಾಂಡ್ ಮಾರ್ಕ್, ಭಾರತದ ಮಾರುಕಟ್ಟೆಗೆ ಮೊದಲ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಮಾರ್ಕ್ ಬ್ರ್ಯಾಂಡ್ ಮೂಲಕ ಫ್ಲಿಪ್‌ಕಾರ್ಟ್ ಈ ಮೊದಲು ಸ್ಮಾರ್ಟ್ ಟಿವಿ, ಸ್ಪೀಕರ್ ಮತ್ತು ಗೃಹಬಳಕೆಯ ಎಲೆಕ್ಟ್ರಾನಿಕ್ಸ್ ಬಿಡುಗಡೆ ಮಾಡಿತ್ತು. ಈ ಬಾರಿ ಹೊಸದಾಗಿ ಮೊದಲ ಮಾರ್ಕ್ ಎಂ3ಸ್ಮಾರ್ಟ್ ಎನ್ನುವ ಆಕರ್ಷಕ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಬೆಲೆ ಮತ್ತು ಲಭ್ಯತೆ ಹೊಸ ಮಾರ್ಕ್ ಎಂ3 ಸ್ಮಾರ್ಟ್, 2 + 32 ಮಾದರಿಗೆ ದೇಶದಲ್ಲಿ ₹7,999 ದರವಿದೆ. ಆದರೆ ಸೀಮಿತ ಅವಧಿಯ ಕೊಡುಗೆಯಾಗಿ ₹6,299ಗೆ ಲಭ್ಯವಾಗುತ್ತಿದೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಅವಧಿಯಲ್ಲಿ ಹೊಸ ಫೋನ್ ಖರೀದಿಗೆ ದೊರೆಯಲಿದೆ. A26: ದೇಶದ ಮಾರುಕಟ್ಟೆಗೆ ಬಜೆಟ್ ದರದ ಸ್ಮಾರ್ಟ್‌ಫೋನ್ 6.088 ಇಂಚಿನ ಡಿಸ್‌ಪ್ಲೇ, 13 ಮೆಗಾಪಿಕ್ಸೆಲ್ ಸಹಿತ ಹಿಂಬದಿಯಲ್ಲಿ ಎರಡು ಕ್ಯಾಮರಾ, 5 ಮೆಗಾಪಿಕ್ಸೆಲ್ ಸೆಲ್ಫಿ, 5,000mAh ಬ್ಯಾಟರಿ ಇದರಲ್ಲಿದೆ. : ಎರಡು ಸ್ಮಾರ್ಟ್‌ ಟಿವಿ ಬಿಡುಗಡೆ ಮಾಡಿದ ಶಿಯೋಮಿ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.