6 : ಹಬ್ಬದ ಸೀಸನ್‌ಗೆ ವಿಶೇಷ ಆವೃತ್ತಿ ಸ್ಮಾರ್ಟ್‌ಫೋನ್ ಪರಿಚಯಿಸಿದ ಒಪ್ಪೊ ಬೆಂಗಳೂರು: ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಒಪ್ಪೊ ಸಂಸ್ಥೆ ಹಬ್ಬದ ವಿಶೇಷ ಮಾರಾಟಕ್ಕೆ ಸಜ್ಜಾಗಿದೆ. ಅಲ್ಲದೆ, ಅದಕ್ಕೆ ಪೂರಕವಾಗಿ ದೀಪಾವಳಿ ಆವೃತ್ತಿ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಒಪ್ಪೊ ರೆನೊ ಸರಣಿಯಲ್ಲಿ ನೂತನ ರೆನೊ 6 ಪ್ರೊ 5G ದೀಪಾವಳಿ ಆವೃತ್ತಿಯನ್ನು ಕಂಪನಿ ಪರಿಚಯಿಸಿದೆ. ಅಲ್ಲದೆ, ಒಪ್ಪೊ ಎಫ್‌19ಎಸ್ ಸ್ಮಾರ್ಟ್‌ಫೋನ್ ಮತ್ತು ಒಪ್ಪೊ ಎಂಕೊ ಬಡ್ಸ್ ಮೇಲೆ ವಿಶೇಷ ದರಕಡಿತವನ್ನು ಕಂಪನಿ ಪ್ರಕಟಿಸಿದೆ. ದರ ವಿವರ ಒಪ್ಪೊ ರೆನೊ 6 ಪ್ರೊ 5G ದೀಪಾವಳಿ ಆವೃತ್ತಿ ಸ್ಮಾರ್ಟ್‌ಫೋನ್‌ಗೆ ದೇಶದಲ್ಲಿ ₹41,990 ಮತ್ತು ಒಪ್ಪೊ ಎಫ್‌19ಎಸ್ ಬೆಲೆ ₹19,990 ಇದೆ. ಮತ್ತೊಂದೆಡೆ ಒಪ್ಪೊ ಎಂಕೊ ಬಡ್ಸ್ ನೀಲಿ ಬಣ್ಣದ ಹೊಸ ಆವೃತ್ತಿ ₹1,999 ದರಕ್ಕೆ ದೊರೆಯಲಿದೆ. : ದೇಶದ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಬೆಲೆ ಏರಿಕೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ವಿಶೇಷ ಆಫರ್ ಸೇಲ್‌ ಮೂಲಕ ಹೊಸ ಒಪ್ಪೊ ರೆನೊ 6 ಪ್ರೊ 5G ದೀಪಾವಳಿ ಆವೃತ್ತಿ ಮತ್ತು ಒಪ್ಪೊ ಎಂಕೊ ಬಡ್ಸ್ ನೀಲಿ ಆವೃತ್ತಿ ಖರೀದಿಗೆ ಲಭ್ಯವಾಗಲಿದೆ. ಎರಡು ಸಾವಿರಕ್ಕಿಂತ ಕಡಿಮೆ ಬೆಲೆ; ಒಪ್ಪೊ 'ಇನ್ಕೊ ಬಡ್ಸ್‌' ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.