ದೇಶದ ಮಾರುಕಟ್ಟೆಗೆ ಕೋಡಕ್‌ ಹೊಸ ಆಂಡ್ರಾಯ್ಡ್ ಟಿವಿ ಬೆಂಗಳೂರು: ದೇಶದಲ್ಲಿ ಹಬ್ಬದ ಸೀಸನ್ ಆರಂಭವಾಗುತ್ತಿದ್ದಂತೆ ಹೊಸ ಮಾದರಿಗಳ ಗೃಹೋಪಯೋಗಿ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿವೆ. ಕೋಡಕ್‌, ನೂತನ ಮಾದರಿಯ ಸಿಎ ಪ್ರೊ ಆಂಡ್ರಾಯ್ಡ್ ಟಿವಿಯನ್ನು ಬಿಡುಗಡೆ ಮಾಡಿದೆ. 43 ಮತ್ತು 50 ಇಂಚಿನ ಡಿಸ್‌ಪ್ಲೇ ಹೊಂದಿರುವ ಎರಡು ಮಾದರಿಗಳು ದೇಶದಲ್ಲಿ ಬಿಡುಗಡೆಯಾಗಿದ್ದು, ಆಂಡ್ರಾಯ್ಡ್ 10 ಕಾರ್ಯಾಚರಣೆ ವ್ಯವಸ್ಥೆ ಮೂಲಕ ಇವು ಕಾರ್ಯನಿರ್ವಹಿಸುತ್ತವೆ. ಬೆಲೆ ಮತ್ತು ಲಭ್ಯತೆ ಕೋಡಕ್‌ ಬಿಡುಗಡೆ ಮಾಡಿರುವ ಹೊಸ ಸ್ಮಾರ್ಟ್ ಟಿವಿಗಳು, ಗುರುವಾರದಿಂದ ಫ್ಲಿಪ್‌ಕಾರ್ಟ್ ಬಿಗ್ ದಿವಾಲಿ ಸೇಲ್ ಮೂಲಕ ದೊರೆಯಲಿದೆ. ವಿವೊ Y33s ಸ್ಮಾರ್ಟ್‌ಫೋನ್ ದರ ₹1,000 ಹೆಚ್ಚಳ: ಇಲ್ಲಿದೆ ವಿವರ ಕೋಡಕ್‌ ಸಿಎ ಪ್ರೊ 43 ಇಂಚಿನ ಟಿವಿ ಬೆಲೆ ₹27,999 ಮತ್ತು 50 ಇಂಚಿನ ಟಿವಿಗೆ ₹33,999 ದರ ನಿಗದಿಪಡಿಸಲಾಗಿದೆ. ಅಲ್ಲದೆ, ಫ್ಲಿಪ್‌ಕಾರ್ಟ್ ಮೂಲಕ ಖರೀದಿಸುವಾಗ ಎಸ್‌ಬಿಐ ಕಾರ್ಡ್ ಬಳಸಿದರೆ, ಶೇ 10 ಡಿಸ್ಕೌಂಟ್ ಕೂಡ ದೊರೆಯಲಿದೆ. ಮ್ಯಾಕ್‌ಬುಕ್, ಐಫೋನ್ ಸ್ವಚ್ಛಗೊಳಿಸಲು ಆ್ಯಪಲ್ ಪಾಲಿಶಿಂಗ್ ಬಟ್ಟೆ: ಬೆಲೆ ₹1,900! ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.