ಮಾರುಕಟ್ಟೆಗೆ ಒನ್‌ಪ್ಲಸ್ ನಾರ್ಡ್ 2x ಪ್ಯಾಕ್-ಮ್ಯಾನ್ ಸ್ಮಾರ್ಟ್‌ಫೋನ್ ಬಿಡುಗಡೆ ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಒನ್‌ಪ್ಲಸ್ ಹೊಸ ನಾರ್ಡ್ ಫೋನ್ ಪರಿಚಯಿಸಿದೆ. ಒನ್‌ಪ್ಲಸ್ ಸರಣಿಯಲ್ಲಿ ಈಗಾಗಲೇ ಬಿಡುಗಡೆಯಾಗಿರುವ ನಾರ್ಡ್ ಮಾದರಿಯಲ್ಲಿ ಹೊಸ ನಾರ್ಡ್ 2 ಎಕ್ಸ್ ಪ್ಯಾಕ್‌-ಮ್ಯಾನ್ ಆವೃತ್ತಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ರಾತ್ರಿಯಲ್ಲಿ ಹೊಳೆಯುವ ಬಣ್ಣವನ್ನು ಹಿಂಭಾಗದ ಪ್ಯಾನಲ್‌ನಲ್ಲಿ ಹೊಂದಿರುವ ಒನ್‌ಪ್ಲಸ್ ನಾರ್ಡ್ 2 ಎಕ್ಸ್ ಪ್ಯಾಕ್‌-ಮ್ಯಾನ್ ಆವೃತ್ತಿ, ಆಕರ್ಷಕ ಪ್ಯಾಕ್‌ ಮೂಲಕ ಲಭ್ಯವಾಗಲಿದೆ. XR20: ಬಲಿಷ್ಠ ವಿನ್ಯಾಸ ಮತ್ತು ಮಿಲಿಟರಿ ದರ್ಜೆಯ ಸ್ಮಾರ್ಟ್‌ಫೋನ್ ಬಿಡುಗಡೆ ಬೆಲೆ ಮತ್ತು ಲಭ್ಯತೆ ಒನ್‌ಪ್ಲಸ್ ನಾರ್ಡ್ 2 ಎಕ್ಸ್ ಪ್ಯಾಕ್‌-ಮ್ಯಾನ್ ಆವೃತ್ತಿ 12 + 256 ಎಂಬ ಒಂದೇ ಮಾದರಿಯಲ್ಲಿ ಅಮೆಜಾನ್ ಮತ್ತು ಒನ್‌ಪ್ಲಸ್.ಇನ್ ಮೂಲಕ ದೊರೆಯಲಿದೆ. ಇದರ ಬೆಲೆ ₹37,999 ಇದ್ದು, ಮಂಗಳವಾರದಿಂದ ಖರೀದಿಗೆ ಲಭ್ಯವಿದೆ. ಮ್ಯಾಕ್‌ಬುಕ್, ಐಫೋನ್ ಸ್ವಚ್ಛಗೊಳಿಸಲು ಆ್ಯಪಲ್ ಪಾಲಿಶಿಂಗ್ ಬಟ್ಟೆ: ಬೆಲೆ ₹1,900! ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.