: ಶಓಮಿ ಬ್ಲ್ಯಾಕ್ ಫ್ರೈಡೇ ವಿಶೇಷ ಆಫರ್ ಮಾರಾಟ ಬೆಂಗಳೂರು: ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಶಓಮಿ, ಬ್ಲ್ಯಾಕ್ ಫ್ರೈಡೇ ವಿಶೇಷ ಆಫರ್ ಸೇಲ್ ಆರಂಭಿಸಿದೆ. ಈಗಾಗಲೇ ವಿಶೇಷ ಕೊಡುಗೆಗಳ ಮಾರಾಟ ಆರಂಭವಾಗಿದ್ದು, ನವೆಂಬರ್ 30ರವರೆಗೆ ನಡೆಯಲಿದೆ. ಎಂಐ.ಕಾಂ, ಎಂಐ.ಹೋಮ್ ಮತ್ತು ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿ ಶಓಮಿ ವಿವಿಧ ಉತ್ಪನ್ನಗಳ ಮೇಲೆ ಕೊಡುಗೆ ಲಭ್ಯವಿದೆ. ಐಸಿಐಸಿಐ ಕೊಡುಗೆ ಶಓಮಿ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ ಗ್ರಾಹಕರು ಐಸಿಐಸಿಐ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ₹5,000 ವರೆಗೆ ಡಿಸ್ಕೌಂಟ್ ದೊರೆಯಲಿದೆ. ಸ್ಮಾರ್ಟ್‌ಫೋನ್, ಟಿವಿ ಮತ್ತು ಗೃಹಬಳಕೆಯ ವಿವಿಧ ಗ್ಯಾಜೆಟ್ ಉತ್ಪನ್ನಗಳು ಶಓಮಿ ಸೇಲ್‌ನಲ್ಲಿ ಲಭ್ಯವಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.