ಮುಂದಿನ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಬರಲಿದೆ ಆ್ಯಪಲ್ ಐಫೋನ್ ಎಸ್‌ಇ 3 ಬೆಂಗಳೂರು: ಕ್ಯುಪರ್ಟಿನೊ ಮೂಲದ ಟೆಕ್ ದೈತ್ಯ ಸಂಸ್ಥೆ ಆ್ಯಪಲ್, ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೊಸ ಐಫೋನ್ ಪರಿಚಯಿಸಲಿದೆ ಎಂದು ವರದಿಗಳು ಹೇಳಿವೆ. ಆ್ಯಪಲ್ ಐಫೋನ್ ಸರಣಿಯಲ್ಲಿ ಎಸ್‌ಇ 3 ಮಾದರಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಐಫೋನ್ ಎಕ್ಸ್‌ಆರ್ ವಿನ್ಯಾಸದಲ್ಲೇ ಹೊಸ ಐಫೋನ್ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಮಾರ್ಚ್ ತಿಂಗಳಿನಲ್ಲಿ ವಿಶೇಷ ಈವೆಂಟ್ ಆಯೋಜಿಸುವ ಮೂಲಕ ಆ್ಯಪಲ್, ಹೊಸ ಐಫೋನ್ ಬಿಡುಗಡೆ ಮಾಡಲಿದೆ. ಹೊಸ ಐಫೋನ್ ಎಸ್‌ಇ 3 ಮಾದರಿಯಲ್ಲಿ ಆ್ಯಪಲ್ 5G ತಂತ್ರಜ್ಞಾನ ಪರಿಚಯಿಸಲಿದೆ. ಜತೆಗೆ ಬ್ಯಾಟರಿ ಮತ್ತು ಕ್ಯಾಮೆರಾದಲ್ಲೂ ಕೆಲವೊಂದು ಬದಲಾವಣೆಗಳನ್ನು ನಿರೀಕ್ಷಿಸಬಹುದು ಎಂದು ವರದಿಗಳು ಹೇಳಿವೆ. : ಶಓಮಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಹೊಸ A15 ಚಿಪ್, ಹೋಮ್ ಬಟನ್ ಇಲ್ಲದ ಡಿಸ್‌ಪ್ಲೇ ವಿನ್ಯಾಸದಲ್ಲಿ ನೂತನ ಐಫೋನ್ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಮ್ಯಾಕ್‌ಬುಕ್, ಐಫೋನ್ ಸ್ವಚ್ಛಗೊಳಿಸಲು ಆ್ಯಪಲ್ ಪಾಲಿಶಿಂಗ್ ಬಟ್ಟೆ: ಬೆಲೆ ₹1,900! ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.