ಏಸಸ್ ಕ್ರೋಮ್‌ಬುಕ್: ವರ್ಕ್ ಫ್ರಮ್‌ ಹೋಮ್‌ಗೆ ಸೂಕ್ತ ಲ್ಯಾಪ್‌ಟಾಪ್ ಬಿಡುಗಡೆ ಬೆಂಗಳೂರು: ವರ್ಕ್ ಫ್ರಮ್ ಹೋಮ್ ಮತ್ತು ಆನ್‌ಲೈನ್ ತರಗತಿಯ ಅವಶ್ಯಕತೆಗೆ ಅನುಕೂಲವಾಗುವ ನೂತನ ಕ್ರೋಮ್‌ಬುಕ್ ಅನ್ನು ಏಸಸ್ ಪರಿಚಯಿಸಿದೆ. ಏಸಸ್ ಕ್ರೋಮ್‌ಬುಕ್ ಸಿಎಕ್ಸ್ 1101 ಮಾದರಿ 11.6 ಇಂಚಿನ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ, 13 ಗಂಟೆಗಳ ಬ್ಯಾಟರಿ ಬ್ಯಾಕಪ್ ದೊರೆಯುತ್ತದೆ ಎಂದು ಕಂಪನಿ ಹೇಳಿದೆ. ನೂತನ ಕ್ರೋಮ್‌ಬುಕ್‌ನಲ್ಲಿ 2 ಯುಎಸ್‌ಬಿ 3.2 ಟೈಪ್ ಸಿ ಮತ್ತು ಟೈಪ್–ಎ ಪೋರ್ಟ್, ಎಚ್‌ಡಿ ಕ್ಯಾಮೆರಾ ವೈಶಿಷ್ಟ್ಯವಿದೆ. 4 , 64 ಮೆಮೊರಿ ಸೌಲಭ್ಯ ಇದರಲ್ಲಿದೆ ಎಂದು ಏಸಸ್ ತಿಳಿಸಿದೆ. ಏಸಸ್ ಕ್ರೋಮ್‌ಬುಕ್‌ನಲ್ಲಿ ಗೂಗಲ್ ಕ್ರೋಮ್ ಓಎಸ್ ಇದ್ದು, ಪ್ಲೇಸ್ಟೋರ್ ಮೂಲಕ ವಿವಿಧ ಆ್ಯ‍ಪ್ ಮತ್ತು ವೆಬ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಅಲೆಕ್ಸಾ ಬೆಂಬಲ ಸಹಿತ ಸೌಂಡ್‌ಬಾರ್ ಬಿಡುಗಡೆ ಮಾಡಿದ ಝೀಬ್ರಾನಿಕ್ಸ್ ಬೆಲೆ ಮತ್ತು ಲಭ್ಯತೆ ಹೊಸ ಕ್ರೋಮ್‌ಬುಕ್ ಸಿಎಕ್ಸ್‌1101 ಬೆಲೆ ₹19,999 ಇದ್ದು, ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದು. ಆರಂಭಿಕ ಕೊಡುಗೆಯಾಗಿ ಡಿಸೆಂಬರ್ 15 ರಿಂದ 21ರವರೆಗೆ ಖರೀದಿಸುವ ಗ್ರಾಹಕರಿಗೆ ₹18,999 ಆಫರ್ ದರಕ್ಕೆ ದೊರೆಯಲಿದೆ. ಜತೆಗೆ ಎಸ್‌ಬಿಐ ಕೊಡುಗೆ ಇದ್ದು, ಶೇ 10 ರಷ್ಟು ರಿಯಾಯಿತಿ ಮತ್ತು ಇಎಂಐ ಕೂಡ ದೊರೆಯಲಿದೆ. XR20: ಬಲಿಷ್ಠ ವಿನ್ಯಾಸ ಮತ್ತು ಮಿಲಿಟರಿ ದರ್ಜೆಯ ಸ್ಮಾರ್ಟ್‌ಫೋನ್ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.