ನೋಕಿಯಾ ಟಿ20 ಟ್ಯಾಬ್ಲೆಟ್ ಜತೆ ಫ್ಲಿಪ್ ಕವರ್ ಉಚಿತ! ಬೆಂಗಳೂರು: ಎಚ್‌ಎಂಡಿ ಗ್ಲೋಬಲ್ ಸಂಸ್ಥೆಯು ಆಕರ್ಷಕ ಸೆಲೆಬ್ರೇಷನ್ ಆಫರ್ ಘೋಷಿಸಿದ್ದು, ಹೊಸ ನೋಕಿಯಾ ಟಿ20 ಟ್ಯಾಬ್ಲೆಟ್ ಖರೀದಿಸುವ ಎಲ್ಲ ಗ್ರಾಹಕರು ಫ್ಲಿಪ್ ಕವರ್ ಉಚಿತವಾಗಿ ಪಡೆಯಲಿದ್ದಾರೆ. ಫ್ಲಿಪ್ ಕವರ್ ಬೆಲೆ ₹999 ಆಗಿದೆ. ಸ್ಟಾಕ್ ಖಾಲಿ ಆಗುವ ವರೆಗೂ ಈ ಆಫರ್ ಚಾಲ್ತಿಯಲ್ಲಿರಲಿದೆ ಎಂದು ಸಂಸ್ಥೆಯು ಘೋಷಿಸಿದೆ. ಎಲ್ಲ ಪ್ರಮುಖ ರಿಟೇಲ್ ಮಳಿಗೆ, ನೋಕಿಯಾ ವೆಬ್‌ಸೈಟ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್ ಅನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ನೋಕಿಯಾ ಟಿ20 ಟ್ಯಾಬ್ಲೆಟ್‌ಗಾಗಿ ವಿಶೇಷವಾಗಿ ವಿನ್ಯಾಸ ಮಾಡಲಾಗಿರುವ ಫ್ಲಿಪ್ ಕವರ್, ಪ್ರಮುಖ ವೈಶಿಷ್ಟ್ಯಗಳನ್ನು ಸುಲಭವಾಗಿ ಕಾರ್ಯನಿರ್ವಹಿಸಲು ನೆರವಾಗಲಿದೆ. ಮಕ್ಕಳು ಹಾಗೂ ವೃತ್ತಿಪರರಿಗೆ ಉತ್ತಮ ಅನುಭವವನ್ನು ಒದಗಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.