ಹೊಸ ಆ್ಯಪಲ್ ಐಫೋನ್ ಎಸ್‌ಇ 5G ಶೀಘ್ರದಲ್ಲಿ ಬಿಡುಗಡೆ ಬೆಂಗಳೂರು: ಆ್ಯಪಲ್ ಕಂಪನಿ ನೂತನ ಮಾದರಿಯ ಐಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಹೊಸ ಸರಣಿಯ ಐಫೋನ್ ಎಸ್‌ಇ 5G ಮಾರ್ಚ್ ಅಥವಾ ಏಪ್ರಿಲ್‌ ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ಐಫೋನ್‌ನಲ್ಲಿ 5G ಸಂಪರ್ಕವನ್ನು ಒದಗಿಸಲು ಆ್ಯಪಲ್ ಮುಂದಾಗಿದೆ. ಅಲ್ಲದೆ, ಈಗಿರುವ ವಿನ್ಯಾಸವನ್ನೇ ಮುಂದುವರಿಸುವ ಸಾಧ್ಯತೆಯಿದೆ. 5G ಬಳಕೆಗೆ ಸೂಕ್ತವಾಗುವಂತೆ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ನೂತನ ಐಫೋನ್‌ನಲ್ಲಿ ಆ್ಯಪಲ್ ಒದಗಿಸಲಿದೆ. | 48 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರಲಿದೆ ಐಫೋನ್ 14: ಮಿಂಗ್–ಚಿ ಕು ಉಳಿದಂತೆ ಆ್ಯಪಲ್ ಬಯಾನಿಕ್ ಚಿಪ್‌ಸೆಟ್, ಕ್ಯಾಮೆರಾದಲ್ಲೂ ಹೊಸ ಐಫೋನ್‌ನಲ್ಲಿ ಹೆಚ್ಚಿನ ಸುಧಾರಣೆಯನ್ನು ಗ್ರಾಹಕರು ನಿರೀಕ್ಷಿಸಬಹುದು ಎಂಬ ಮಾತು ಮಾರುಕಟ್ಟೆಯಲ್ಲಿ ಕೇಳಿಬಂದಿದೆ. : ಬುಲೆಟ್‌ಪ್ರೂಫ್ ಮಾದರಿ ಮಾರುಕಟ್ಟೆಗೆ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.