ಸೋನಿ ಸ್ಮಾರ್ಟ್ ಟಿವಿ ಮತ್ತು ಗ್ಯಾಜೆಟ್‌ ಮೇಲೆ ವಿಶೇಷ ಡಿಸ್ಕೌಂಟ್ ಕೊಡುಗೆ ಬೆಂಗಳೂರು: ಸೋನಿ ಎಲೆಕ್ಟ್ರಾನಿಕ್ಸ್ ದೇಶದಲ್ಲಿ ವರ್ಷಾಂತ್ಯದ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಸ್ಮಾರ್ಟ್ ಟಿವಿ ಮತ್ತು ಆಡಿಯೋ ಉತ್ಪನ್ನಗಳ ಮೇಲೆ ಹೆಚ್ಚುವರಿ ಡಿಸ್ಕೌಂಟ್ ಇದ್ದು, ಕ್ಯಾಶ್‌ಬ್ಯಾಕ್ ಕೊಡುಗೆ ಕೂಡ ಇರಲಿದೆ. ಸೋನಿ ಎಲೆಕ್ಟ್ರಾನಿಕ್ಸ್ ಸ್ಟೋರ್ ಮತ್ತು ಕಂಪನಿಯ ಆನ್‌ಲೈನ್ ಸ್ಟೋರ್, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಜನವರಿ 3ರವರೆಗೆ ಗ್ರಾಹಕರಿಗೆ ಕೊಡುಗೆಯ ಪ್ರಯೋಜನ ದೊರೆಯಲಿದೆ. ಸೋನಿ ಬ್ರಾವಿಯಾ ಸ್ಮಾರ್ಟ್ ಟಿವಿ ಖರೀದಿಗೆ ಶೇ 30ರವರೆಗೆ ಡಿಸ್ಕೌಂಟ್, ಸೋನಿ ಹೆಡ್‌ಫೋನ್, ಸ್ಪೀಕರ್ ಮತ್ತು ಹೋಮ್ ಥಿಯೇಟರ್ ಖರೀದಿಗೂ ಡಿಸ್ಕೌಂಟ್ ಲಭ್ಯವಾಗಲಿದೆ. : ಶಓಮಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಬ್ಲೂಟೂತ್ ವೈರ್‌ಲೆಸ್ ಸ್ಪೀಕರ್, ನಾಯ್ಸ್ ಕ್ಯಾನ್ಸಲೇಶನ್ ಹೆಡ್‌ಫೋನ್ ಮೇಲೆ ವರ್ಷಾಂತ್ಯದ ಡಿಸ್ಕೌಂಟ್ ಸೇಲ್ ಕೊಡುಗೆಗಳಿದ್ದು, ಇಎಂಐ, ಕ್ಯಾಶ್‌ಬ್ಯಾಕ್ ಮತ್ತು ವಿಸ್ತರಿತ ವಾರಂಟಿ ಆಫರ್ ಕೂಡ ದೊರೆಯಲಿದೆ ಎಂದು ಕಂಪನಿ ಹೇಳಿದೆ. : ಬುಲೆಟ್‌ಪ್ರೂಫ್ ಮಾದರಿ ಮಾರುಕಟ್ಟೆಗೆ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.