ಗ್ಯಾಜೆಟ್ ಮಾರುಕಟ್ಟೆಗೆ ಪ್ಯಾನಸೋನಿಕ್ ಟಫ್‌ಬುಕ್ ಟ್ಯಾಬ್ಲೆಟ್: ಬೆಲೆ ವಿವರ ಬೆಂಗಳೂರು: ಲಾಜಿಸ್ಟಿಕ್ಸ್, ಸಾರಿಗೆ, ನಿರ್ಮಾಣ ಪ್ರದೇಶ ಮತ್ತು ಉದ್ಯಮದಲ್ಲಿ ಬಳಕೆ ಮಾಡಲು ಅನುಕೂಲವಾಗುವಂತಹ ಟ್ಯಾಬ್ಲೆಟ್ ಅನ್ನು ಪ್ಯಾನಸೋನಿಕ್ ದೇಶದಲ್ಲಿ ಬಿಡುಗಡೆ ಮಾಡಿದೆ. ಹೆಚ್ಚಿನ ತಾಪಮಾನ ಮತ್ತು ಚಳಿ ಇರುವಲ್ಲಿಯೂ ಸರಾಗವಾಗಿ ಕಾರ್ಯನಿವರ್ಹಿಸಬಲ್ಲ ಮತ್ತು ಅಧಿಕ ಬ್ಯಾಟರಿ ಸಾಮರ್ಥ್ಯದ ಪ್ಯಾನಸೋನಿಕ್ ಟಫ್‌ಬುಕ್ ಎಸ್‌1 ಬೆಲೆ ದೇಶದಲ್ಲಿ ₹98,000 ದಿಂದ ಆರಂಭವಾಗುತ್ತದೆ. ಟಫ್‌ಬುಕ್ ಎಸ್‌1 7 ಇಂಚಿನ ಡಿಸ್‌ಪ್ಲೇ ಹೊಂದಿರುವ ಪ್ಯಾನಸೋನಿಕ್ ಟ್ಯಾಬ್ಲೆಟ್, ಹೆಚ್ಚು ಪ್ರಖರ ಬೆಳಕು ಇರುವಾಗಲೂ ಸಲೀಸಾಗಿ ಕಾರ್ಯನಿರ್ವಹಿಸುತ್ತದೆ. ಜತೆಗೆ ಗಟ್ಟಿಯಾದ ಹೊರಮೈ ಹೊಂದಿರುವುದರಿಂದ ಸಾಮಾನ್ಯವಾಗಿ ಕೆಳಗಡೆ ಬಿದ್ದರೂ ಏನೂ ಆಗುವುದಿಲ್ಲ. ಏಸಸ್ ಕ್ರೋಮ್‌ಬುಕ್: ವರ್ಕ್ ಫ್ರಮ್‌ ಹೋಮ್‌ಗೆ ಸೂಕ್ತ ಲ್ಯಾಪ್‌ಟಾಪ್ ಬಿಡುಗಡೆ ಒಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 660 ಪ್ರೊಸೆಸರ್ ಮತ್ತು ಅಡ್ರೆನೊ 512 ಗ್ರಾಫಿಕ್ಸ್, 4 ಹಾಗೂ 64 ಮೆಮೊರಿ ಸ್ಟೋರೇಜ್ ಹೊಂದಿದೆ. ಹಾಗೂ 3,200mAh ಹಾಗೂ 5,580mAh ಎಂಬ ಎರಡು ಬ್ಯಾಟರಿ ಆಯ್ಕೆಗಳಲ್ಲಿ ದೊರೆಯಲಿದೆ. : ಬುಲೆಟ್‌ಪ್ರೂಫ್ ಮಾದರಿ ಮಾರುಕಟ್ಟೆಗೆ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.