T1 5G: ಆಕರ್ಷಕ ಸ್ಮಾರ್ಟ್‌ಫೋನ್ ಪರಿಚಯಿಸಿದ ವಿವೊ ಬೆಂಗಳೂರು: ದೇಶದ ಗ್ಯಾಜೆಟ್ ಮಾರುಕಟ್ಟೆಗೆ ವಿವೊ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ವಿವೊ ಟಿ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಹೊಸದಾಗಿ ವಿವೊ T1 5G ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ವಿವೊ T1 5G ನೂತನ ಸ್ಮಾರ್ಟ್‌ಫೋನ್‌ನಲ್ಲಿ 6.44 ಇಂಚಿನ ಫುಲ್‌ ಎಚ್‌ಡಿ+ ಅಮೊಲಿಡ್ ಡಿಸ್‌ಪ್ಲೇ, ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ. ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 778G ಒಕ್ಟಾ ಕೋರ್ ಪ್ರೊಸೆಸರ್ ಮತ್ತು ಅಡ್ರೆನೊ 642L ಗ್ರಾಫಿಕ್ಸ್ ಬೆಂಬಲವಿದೆ. ಜತೆಗೆ 8 ಮತ್ತು 128 ಸ್ಟೋರೇಜ್ ಇದ್ದು, 4,700mAh ಬ್ಯಾಟರಿ ಹಾಗೂ 66W ಚಾರ್ಜಿಂಗ್ ಬೆಂಬಲವಿದೆ ಎಂದು ಕಂಪನಿ ಹೇಳಿದೆ. ಹಿಂಭಾಗದಲ್ಲಿ 64 ಮೆಗಾಪಿಕ್ಸೆಲ್ ಜತೆಗೆ 8+2 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ. ರಿಯಲ್‌ಮಿ ದೇಶದ ಮಾರುಕಟ್ಟೆಗೆ ಪರಿಚಯಿಸಿದೆ ಹೊಸ 3 ಸ್ಮಾರ್ಟ್‌ಫೋನ್ ವಿವೊ ಸ್ಮಾರ್ಟ್‌ಫೋನ್ 6 + 128 ಮಾದರಿಗೆ ₹23,999 ಹಾಗೂ 8GB + 128GB ಆವೃತ್ತಿಗೆ ₹24,999 ದರ ಹೊಂದಿದೆ. ದೇಶದಲ್ಲಿ ಫ್ಯಾಂಟಮ್ ಎಕ್ಸ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಟೆಕ್ನೊ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.