ಪಿಂಕ್‌ ಗೋಲ್ಡ್‌ ಬಣ್ಣದಲ್ಲಿ ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ಎಸ್‌22' ಗುರುಗ್ರಾಮ: ಸ್ಯಾಮ್‌ಸಂಗ್‌ ಕಂಪನಿಯ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ 'ಗ್ಯಾಲಕ್ಸಿ ಎಸ್‌22' ಈಗ ಹೊಸ ಬಣ್ಣದಲ್ಲಿ ಲಭ್ಯವಿದೆ. ಅತ್ಯಾಕರ್ಷಕವಾದ ಪಿಂಕ್‌ ಗೋಲ್ಡ್‌ ಬಣ್ಣದಲ್ಲಿ ಎಸ್‌22 ಮಾದರಿಯ ಫೋನ್‌ ಸಿಗುತ್ತಿದೆ. ಹೊಚ್ಚ ಹೊಸ 4ಎನ್‌ಎಂ ಸ್ನ್ಯಾಪ್‌ಡ್ರ್ಯಾಗನ್‌ (8ನೇ ಜನರೇಷನ್‌) ಪ್ರೊಸೆಸರ್‌ ಒಳಗೊಂಡಿರುವ ಈ ಫೋನ್‌, ರಾತ್ರಿ ಸಮಯದಲ್ಲಿ ಫೋಟೊ ತೆಗೆಯಲು, ಅತ್ಯುತ್ತಮ ಗುಣಮಟ್ಟದ ವಿಡಿಯೊ ಸೆರೆಹಿಡಿಯಲು ಸಹಕಾರಿಯಾಗಿದೆ. ಆಟೊ ಫ್ರೇಮಿಂಗ್‌ ಸೇರಿದಂತೆ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಇದರ ಕ್ಯಾಮೆರಾ ಒಳಗೊಂಡಿದೆ. ರಾ () ಆ್ಯಪ್‌ ಮೂಲಕ ಡಿಎಸ್‌ಎಲ್‌ಆರ್‌ ರೀತಿಯ ಅನುಭವ ಪಡೆಯಬಹುದಾಗಿದೆ. ಪಿಂಕ್‌ ಗೋಲ್ಡ್‌ ಬಣ್ಣದ 'ಗ್ಯಾಲಕ್ಸಿ ಎಸ್‌22'ಫೋನ್‌ 8ಜಿಬಿ ರ್‍ಯಾಮ್‌ ಮತ್ತು 128ಜಿಬಿ ಸಂಗ್ರಹ ಸಾಮರ್ಥ್ಯದಲ್ಲಿ ಲಭ್ಯವಿದ್ದು, ಬೆಲೆ ₹72,999 ನಿಗದಿಯಾಗಿದೆ. ಈ ಫೋನ್‌ ಖರೀದಿಸುವವರಿಗೆ ಗ್ಯಾಲಕ್ಸಿ ಬಡ್ಸ್‌ ₹2,999ಕ್ಕೆ ಸಿಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.