X80 : ಪ್ರೀಮಿಯಂ ಸ್ಮಾರ್ಟ್‌ಫೋನ್ ಪರಿಚಯಿಸಿದ ವಿವೊ ಬೆಂಗಳೂರು: ಚೀನಾ ಮೂಲದ ಗ್ಯಾಜೆಟ್ ತಯಾರಿಕ ಸಂಸ್ಥೆ ವಿವೊ, ಎಕ್ಸ್ ಸರಣಿಯಲ್ಲಿ ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್ ಸರಣಿಯಲ್ಲಿ ವಿವೊ X80 ಮತ್ತು ವಿವೊ X80 ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ವಿವೊ X80 6.78 ಇಂಚಿನ ಕ್ವಾಡ್ ಎಚ್‌ಡಿ+ ಡಿಸ್‌ಪ್ಲೇ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 8 ಜೆನ್ 1 ಒಕ್ಟಾ ಕೋರ್ ಪ್ರೊಸೆಸರ್, ಅಡ್ರೆನೊ 730 ಗ್ರಾಫಿಕ್ಸ್ ಬೆಂಬಲ V1+ ಚಿಪ್ 12 , 256 ಸ್ಟೋರೇಜ್ ಜತೆಗೆ 4,700mAh ಬ್ಯಾಟರಿ ಮತ್ತು 80W ಫಾಸ್ಟ್‌ ಚಾರ್ಜಿಂಗ್. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 48+12+8 ಮೆಗಾಪಿಕ್ಸೆಲ್ ಕ್ಯಾಮೆರಾ ಹಿಂಭಾಗದಲ್ಲಿದೆ. ಉಳಿದಂತೆ, 32 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದರಲ್ಲಿದೆ. ಬೆಲೆ ಮತ್ತು ಲಭ್ಯತೆ ವಿವೊ X80 12 , 256 ಮಾದರಿಗೆ ದೇಶದಲ್ಲಿ ₹79,999 ದರವಿದೆ. ಆ್ಯಪಲ್ ಐಪೋನ್‌ನಲ್ಲಿ ಟೈಪ್‌–ಸಿ ಚಾರ್ಜಿಂಗ್ ಪೋರ್ಟ್ ಸಾಧ್ಯತೆ ಆರಂಭಿಕ ಕೊಡುಗೆಯಾಗಿ, ಎಚ್‌ಡಿಎಫ್‌ಸಿ ಕಾರ್ಡ್ ಬಳಕೆದಾರರಿಗೆ ₹7,000 ಡಿಸ್ಕೌಂಟ್ ಮತ್ತು ಇತರ ಕಾರ್ಡ್ ಹೊಂದಿರುವವರಿಗೆ ಶೇ 10ರವರೆಗೆ ಡಿಸ್ಕೌಂಟ್ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ. ಎಲೆಕ್ಟ್ರಾನಿಕ್ ಸಾಮಗ್ರಿಗಳ 'ರಿಪೇರಿಗೂ' ಇದೆ ಹಕ್ಕು! ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.