ದೇಶದ ಮಾರುಕಟ್ಟೆಗೆ ಹೊಸ ನೋಕಿಯಾ ಲೈಟ್ ಇಯರ್‌ಬಡ್ಸ್ ಬಿಡುಗಡೆ ಬೆಂಗಳೂರು: ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾ ಬ್ರ್ಯಾಂಡ್, ದೇಶದಲ್ಲಿ ಎರಡು ನೂತನ ಮಾದರಿಯ ಇಯರ್‌ಫೋನ್ ಪರಿಚಯಿಸಿದೆ. ನೋಕಿಯಾ ಲೈಟ್ ಇಯರ್‌ಬಡ್ಸ್ ಬಿಎಚ್‌ 205 ಮತ್ತು ನೋಕಿಯಾ ವೈರ್ಡ್ ಬಡ್ಸ್ ಡಬ್ಲ್ಯುಬಿ–101 ಬಿಡುಗಡೆಯಾಗಿದ್ದು, ಆಕರ್ಷಕ ವಿನ್ಯಾಸ ಮತ್ತು ಉತ್ತಮ ಧ್ವನಿ ಹೊಂದಿದೆ ಎಂದು ಕಂಪನಿ ಹೇಳಿದೆ. ಹೊಸ ನೋಕಿಯಾ ಬಡ್ಸ್, ನೋಕಿಯಾ ಡಾಟ್‌ಕಾಂ, ಪ್ರಮುಖ ರಿಟೇಲ್ ಮಳಿಗೆಗಳು ಮತ್ತು ಇ–ಕಾಮರ್ಸ್ ತಾಣಗಳಲ್ಲಿ ದೊರೆಯಲಿದೆ. ಮನರಂಜನೆ, ಕಚೇರಿ ಕೆಲಸ, ಆಟ ಹಾಗೂ ವಿವಿಧ ಸಂದರ್ಭದಲ್ಲಿ ನೋಕಿಯಾ ಬಡ್ಸ್ ಬಳಸಬಹುದು ಎಂದು ಸಂಸ್ಥೆ ತಿಳಿಸಿದೆ. ಬೆಲೆ ಮತ್ತು ವಿವರ ನೋಕಿಯಾ ಲೈಟ್ ಇಯರ್‌ಬಡ್ಸ್ ಬಿಎಚ್‌ 205, 36 ಗಂಟೆಗಳ ಪ್ಲೇಟೈಮ್ ಒದಗಿಸಲಿದೆ. ದೇಶದಲ್ಲಿ ₹2,799 ದರವಿದೆ. ನೋಕಿಯಾ ಟಿ20 ಟ್ಯಾಬ್ಲೆಟ್ ಜತೆ ಫ್ಲಿಪ್ ಕವರ್ ಉಚಿತ! . 6 , - . . , ://./aOPiE3XJvQ.# # ../jhQgk8dC3O ನೋಕಿಯಾ ವೈರ್ಡ್ ಬಡ್ಸ್ ಡಬ್ಲ್ಯುಬಿ–101 ಸ್ಪಷ್ಟ ಧ್ವನಿ, ಕರೆ ನಿರ್ವಹಣೆ ಹೊಂದಿದ್ದು, ₹ 299ನಿಂದ ಆರಂಭಎಂದು ಕಂಪನಿ ಹೇಳಿದೆ. ಹೊಸ ಆ್ಯಪಲ್ ಐಫೋನ್ ಎಸ್‌ಇ 5G ಶೀಘ್ರದಲ್ಲಿ ಬಿಡುಗಡೆ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.