ಟೆಕ್ನೋ: ಹೊಸ ಪೋವಾ 5ಜಿ ಮ್ಯಾಂಚೆಸ್ಟರ್ ಸಿಟಿ ಆವೃತ್ತಿ ಸ್ಮಾರ್ಟ್‌ಫೋನ್ ಬೆಂಗಳೂರು: ಟ್ರಾನ್ಸಿಷನ್ ಇಂಡಿಯಾ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ನೂತನ 5ಜಿ ಆವೃತ್ತಿಯನ್ನು ಪರಿಚಯಿಸಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 900 ಮತ್ತು 6000mAh ಬ್ಯಾಟರಿ ಇದರ ವಿಶೇಷತೆಯಾಗಿದ್ದು, ₹19,999 ದರ ನಿಗದಿಪಡಿಸಲಾಗಿದೆ. ಟೆಕ್ನೋ ಪೋವಾ 5ಜಿ 11GB ಈ ಸ್ಮಾರ್ಟ್‌ಫೋನ್‌ನ ವಿಶೇಷತೆಯಾಗಿದ್ದು, 128 ಸ್ಟೋರೇಜ್ ಇರಲಿದೆ. ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ವಿಸ್ತರಿಸಬಹುದಾಗಿದೆ. 120hz ರಿಫ್ರೆಶ್ ರೇಟ್ ಹೊಂದಿರುವ 6.9 ಇಂಚಿನ ಡಿಸ್‌ಪ್ಲೇ, 50 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಇದರ ವಿಶೇಷತೆಯಾಗಿದೆ. 7 5G: ನೂತನ ಸರಣಿಯ ಸ್ಮಾರ್ಟ್‌ಫೋನ್ ಪರಿಚಯಿಸಿದ ಒಪ್ಪೊ ಆರಂಭಿಕ ಕೊಡುಗೆ ಪೋವಾ 5ಜಿ ಸ್ಮಾರ್ಟ್‌ಫೋನ್ ಫೆಬ್ರುವರಿ 14, 2022ರಿಂದ ಅಮೆಜಾನ್‌ ಮೂಲಕ ಖರೀದಿಗೆ ಲಭ್ಯವಿದೆ. ಅಲ್ಲದೆ, ಮೊದಲ 1,500 ಗ್ರಾಹಕರಿಗೆ ₹1,999 ಮೌಲ್ಯದ ಪವರ್ ಬ್ಯಾಂಕ್ ಉಚಿತವಾಗಿ ದೊರೆಯಲಿದೆ. ಮೈಕ್ರೋಮ್ಯಾಕ್ಸ್‌ ಹೊಸ ಫೋನ್‌ 'ಇನ್‌ ನೋಟ್‌ 2': ಬೆಲೆ ₹13,490 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.