11: ನೂತನ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಶಓಮಿ ಬೆಂಗಳೂರು: ಶಓಮಿ, ದೇಶದ ಗ್ಯಾಜೆಟ್ ಮಾರುಕಟ್ಟೆಗೆ ನೂತನ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ರೆಡ್ಮಿ ನೋಟ್ ಸರಣಿಯಲ್ಲಿ ಹೊಸ ನೋಟ್ 11 ಬಿಡುಗಡೆಯಾಗಿದೆ. ಜತೆಗೆ ರೆಡ್ಮಿ ನೋಟ್ 11ಎಸ್ ಆವೃತ್ತಿ ಕೂಡ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್‌ನಲ್ಲಿ 6.43 ಇಂಚಿನ ಡಿಸ್‌ಪ್ಲೇ, ಆಂಡ್ರಾಯ್ಡ್ 11 ಆಧಾರಿತ 13 ಓಎಸ್, 4 /6 ಹಾಗೂ 64 /128 ಎಂಬ ಎರಡು ಸ್ಟೋರೇಜ್ ಆಯ್ಕೆ ಗ್ರಾಹಕರಿಗೆ ದೊರೆಯಲಿದೆ. ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ ಸಿಲಿಕಾನ್, ಅಡ್ರೆನೊ 610 ಪ್ರೊಸೆಸರ್ ಇದೆ. ಜತೆಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾ ಜತೆಗೆ 8 ಮೆಗಾಪಿಕ್ಸೆಲ್ + 2+2 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಜತೆಗೆ 13 ಮೆಗಾಪಿಕ್ಸೆಲ್ ಸೆಲ್ಫಿ ಕೂಡ ಇದರಲ್ಲಿದೆ. ಬೆಲೆ ವಿವರ ರೆಡ್ಮಿ ನೋಟ್ 11 ಸ್ಮಾರ್ಟ್‌ಫೋನ್ ದರ 4 + 64 ಮಾದರಿಗೆ ₹13,499 ಹಾಗೂ 6 + 64 ಆವೃತ್ತಿಗೆ ₹14,499 ಮತ್ತು 6 + 128 ಮಾದರಿಗೆ ₹15,999 ದರವಿದೆ. ಟೆಕ್ನೋ: ಹೊಸ ಪೋವಾ 5ಜಿ ಮ್ಯಾಂಚೆಸ್ಟರ್ ಸಿಟಿ ಆವೃತ್ತಿ ಸ್ಮಾರ್ಟ್‌ಫೋನ್ ಇದೇ ಸಂದರ್ಭದಲ್ಲಿ ಶಓಮಿ ರೆಡ್ಮಿ ಸ್ಮಾರ್ಟ್‌ ಬ್ಯಾಂಡ್ ಪ್ರೊ ಹಾಗೂ ರೆಡ್ಮಿ ಸ್ಮಾರ್ಟ್ ಟಿವಿ X43 ಕೂಡ ಬಿಡುಗಡೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.